ಗುರುವಾರ ಮೊಹರಂ ಆಟವಿ ಖತಾಲ..
ರಾಜ್ಯ, ಅಂತರ ರಾಜ್ಯದಿಂದ ಹತ್ತು ಸಾವಿರ ಭಕ್ತರು ಸೇರುವರು..!
ಹಿಂದೂ ಮುಸ್ಲಿಂ ಭಾವೈಕ್ಯದ ಹಬ್ಬ..!
ಇಂಡಿ : ಪ್ರಸಿದ್ಧ ಹಿಂದು ಮುಸ್ಲಿಂಮರು
ಭಾವೈಕ್ಯ ದಿಂದ ಆಚರಿಸುವ ಮೊಹರಮ್ ಹಬ್ಬದ ಆಟವಿ
ಖತಾಲ ಗುರುವಾರ ೨೭ ರಂದು ಜರುಗಲಿದೆ ಎಂದು
ದೇವಸ್ಥಾನ ಸಮಿತಿಯ ವಾಯ್.ಎಂ.ಮಕಾನದಾರ
ತಿಳಿಸಿದ್ದಾರೆ.
ಗುರುವಾರ ತಾಲೂಕು ಸೇರಿದಂತೆ ವಿಜಯಪುರ, ಬಾಗಲಕೋಟ, ಗುಲಬರ್ಗಾ ಜಿಲ್ಲೆಗಳ ಮತ್ತು
ಮಹಾರಾಷ್ಟ್ರದ ಸೋಲಾಪುರ, ಪೂನಾ, ಮುಂಬಯಿ
ಸೇರಿದಂತೆ ಹೈದ್ರಾಬಾದ ಇನ್ನಿತರ ಕಡೆಗಳಿಂದ ಹತ್ತು ಸಾವಿರಕ್ಕೂ ಅಧಿಕ ಭಕ್ತರು ಸೇರುವರು.
ಉಳಿದಂತೆ ೨೬ ಬುಧವಾರದಂದು ಪಟ್ಟಣದಲ್ಲಿ ಝೂಲ್
ಫಕೀರ ಮೆರವಣೆಗೆ ನಡೆಯುತ್ತದೆ. ಗುರುವಾರ ಆಟವಿ ಖತಾಲ ಮತ್ತು ಶುಕ್ರವಾರ ೨೮ ರಂದು ನಸುಕಿನ ೫ ಗಂಟೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಸೇನ,
ಹುಸೇನ, ಕಾಸೀಮ ದೇವರ ಭವ್ಯ ಮೆರವಣೆಗೆ ನಡೆಯುವದು ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹುಮಾಯುನ್ ಮಕಾನದಾರ, ಕಮರೂಲ್ ಮಕಾನದಾರ, ಆದಿಲ್ ಮಕಾನದಾರ, ರಫೀಕ ಮಕಾನದಾರ ಮತ್ತಿತರಿದ್ದರು.