ದಾದಿ ರತನ ಮೋಹಿನಿ ಇವರಿಗೆ ಶ್ರದ್ದಾಂಜಲಿ
ಇಂಡಿ : ತೀರ ಇತ್ತೀಚಿಗೆ ನಿಧನರಾದ ಪ್ರಜಾಪಿತ ಬ್ರಹ್ಮಕುಮಾರಿ ವಿವಿ ಮುಖ್ಯಸ್ಥೆಯಾಗಿರುವ ಬ್ರಹ್ಮ ಕುಮಾರಿ ದಾದಿ ರತನ ಮೋಹಿನಿ ತಮ್ಮ ಆದ್ಯಾತ್ಮಿಕ ಪ್ರವಚನದಿಂದ ಕೋಟ್ಯಾಂತರ ಜನರ ಜೀವನ ಬೆಳಕು ತಂದ ಅವರ ಸೇವೆ ಸದಾ ಸ್ಮರಣ Ãಯ ಎಂದು ಬ್ರಹ್ಮ ಕುಮಾರಿ ಬಿ.ಕೆ. ಯಮುನಾ ಅಕ್ಕಾ ಹೇಳಿದರು.
ಅವರು ಪಟ್ಟಣದ ಬ್ರಹ್ಮ ಕುಮಾರಿ ವಿವಿ ಯಲ್ಲಿ ನಡೆದ ದಾದಿ ರತನ ಮೋಹಿನಿ ಇವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿ.ಕೆ ಶ್ರೀದೇವಿ ಅಕ್ಕನವರು ಮಾತನಾಡಿ ಶಾಂತಿ ಸಹಬಾಳ್ವೆಯನ್ನು ಜನರಿಗೆ ಭೋಧನೆ ಮಾಡುತ್ತಾ ಸಮಾಜದ ಏಳಿಗೆಗಾಗಿ ಭೋಧನೆ ಮಾಡುತ್ತ ಸಮಾಜದ ಏಳಿಗೆಗಾಗಿ ಶ್ರಮಿಸಿದ ಅವರಿಂದ ಜನರು ಬದುಕಿನ ಅರಿವು ಪಡೆದಿದ್ದಾರೆ ಎಂದು ಹೇಳಿದರು.
ರಾಜೇಶ್ವರಿ ಕೋಳೆಕರ, ಅರವಿಂದ ಕಠಾರೆ,ಪಲ್ಲವಿ ಗೋಟ್ಯಾಳ, ಶಿವಲಿಂಗಪ್ಪ ಪಟ್ಟದಕಲ್ಲ, ಸ್ಹೇಹಾ ಪಾಟೀಲ, ಎನ್.ವಿ.ಹಂಜಗಿ, ಬಿ.ಎಸ್.ಗೋಟ್ಯಾಳ, ರಾಜಪ್ಪ ಲಕ್ಕುಂಡಿ, ಸಿದ್ದಾರೂಢ ಬಿರಾದಾರ, ರಾಮಚಂದ್ರ ಹೂಗಾರ, ಮಹೇಶ ಕೆಸೆಟ್ಟಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಬ್ರಹ್ಮ ಕುಮಾರಿ ವಿವಿಯಲ್ಲಿ ನಡೆದ ದಾದಿ ರತನ ಮೋಹಿನಿ ಇವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಯಮುನಾ ಅಕ್ಕಾ ಮಾತನಾಡಿದರು.



















