ಬೆಂಗಳೂರು: ಕೇಂದ್ರ ಬಜೆಟ್ ಮೇಲಿನ ನಿರೀಕ್ಷೆ ಮತ್ತೆ ಬುಡಮೇಲಾಗಿದೆ ಎಂದು ಬಜೆಟ್ ಕುರಿತು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಕಾರ್ಯದರ್ಶಿಬಾ ಷುಮಿಯಾ ವಡಗೇರಾ ಆಕ್ರೋಶ ಹೊರ ಹಾಕಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಕುರಿತಾದ ನಿರೀಕ್ಷೆಗಳೆಲ್ಲ ಹುಸಿ ಎಂದು ಬಾಷುಮಿಯಾ ವಡಗೇರಾ ಅಸಮಾಧಾನ ಹೊರಹಾಕಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2022-23ನೇ ಸಾಲಿನ ಆಯವ್ಯಯವು ಕೋವಿಡ್-19 ಯಿಂದ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ಕಾರ್ಮಿಕರ ವಲಯಕ್ಕೆ ಆದ ಕಷ್ಟ ನಿವಾರಣೆ ಮಾಡಲು ಯೋಜನೆ ರೂಪಿಸದೆ ಹುಸಿ ಸುಳ್ಳು ಭರವಸೆಗಳ ಸರಮಾಲೆಯ ಬಜೆಟ್ ನೀಡಿ
ಬಜೆಟ್ನಿಂದ ಜನರ ನಿರೀಕ್ಷೆಗಳು ಬುಡಮೇಲಾಗಿವೆ. ಕಾರ್ಮಿಕರು, ಸಾಮಾನ್ಯ ವರ್ಗದ ಜನರಿಗೆ ಉಪಯೋಗವಾಗುವಂತ ಬಜೆಟ್ ಮಂಡಿಸಿಲ್ಲ.
ಈ ಬಜೆಟ್ನ ನ್ಯೂನ್ಯತೆಗಳ ವಿರುದ್ಧ ನಮ್ಮ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ರಾಜ್ಯ ಘಟಕದ ವತಿಯಿಂದ ಹೋರಾಟ ಮಾಡಲಾಗುವದು. ಬಜೆಟ್ ಬರೀ ಬಂಡವಾಳಶಾಹಿಗಳ ಪರವಾಗಿದೆ. ಹಿಂದಿನಿಂದಲೂ ಬಿಜೆಪಿಯವರು ಕರ್ನಾಟಕಕ್ಕೆ ಅನ್ಯಾಯ ಮಾಡಿಕೊಂಡೇ ಬಂದಿದ್ದಾರೆ. ರಾಜ್ಯಕ್ಕೆ ನೀಡಬೇಕಾದ ಅನುದಾನದ ವಿಚಾರದಲ್ಲೂ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಬಜೆಟ್ ಮೇಲಿನ ನಿರೀಕ್ಷೆ ಬುಡಮೇಲಾಗಿದೆ ಕೇಂದ್ರದ ಬಜೆಟ್ ಬಡವರ ವಿರೋಧಿ ಬಜೆಟ್, ರೈತರ, ಕಾರ್ಮಿಕರ ವಿರೋಧಿ ಬಜೆಟ್. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ ಎಂದು ಹೇಳಿದ್ದಾರೆ.