ಕರ್ನಾಟಕ ಬಂದ್ ಇಂಡಿಯಲ್ಲಿ ಹೇಗೆ ಇತ್ತು ಗೊತ್ತಾ..!
ಇಂಡಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಕನ್ನಡಪರ ಮತ್ತು ರೈತ ಸಂಘಟನೆಗಳು ಕರ್ನಾಟಕ ಬಂದ್ ಕರೆ ನೀಡಿದರು. ಆದರೆ ಇಂಡಿ ತಾಲೂಕಿನಲ್ಲಿ ಯಾವುದೇ ಹೋರಾಟದ ಪ್ರತಿಕ್ರಿಯೆ ನಡೆಯಲಿಲ್ಲ.

ಪಟ್ಟಣದಲ್ಲಿ ಕಾವೇರಿ ವಿಷಯದಲ್ಲಿ ತಾಲೂಕಿನ ಯಾವುದೇ ರೈತಪರ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಇಳಿಯಿಲಿಲ್ಲ. ಆದರೆ ಪಟ್ಟಣದಲ್ಲಿ ಹಾಗೂ ತಾಲೂಕುನಾದ್ಯಾದಂತ ಎಂದಿನಂತೆ ಜನ ಜೀವನ, ಕಚೇರಿ, ವ್ಯಾಪಾರ ವಹಿವಾಟು, ಶಾಲಾ ಕಾಲೇಜು, ಸಾರಿಗೆ ಸಂಪರ್ಕ ನಡೆಯಿತು. ಜೊತೆಗೆ ಪೋಲಿಸ್ ಇಲಾಖೆಯೂ ಸಹ ಬೀಗಿಬಂದೋಬಸ್ತ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ರೈತಪರ ಸಂಘಟನೆ ಮುಖಂಡ ಗುರಪ್ಪ ಅಗಸರ ಮಾತಾನಾಡಿ ಅವರು, ಉತ್ತರ ಕರ್ನಾಟಕದ ನೀರಾವರಿ ಯಾವ ಹೋರಾಟಕ್ಕೂ ಇಲ್ಲಿಯವರೆಗೆ ದಕ್ಷಿಣ ಕರ್ನಾಟಕ ಭಾಗದವರು ಬೆಂಬಲ ನೀಡಲಿಲ್ಲ. ಈಗ ನಾವು ಹೇಗೆ ನೀಡುವುದು ಎಂದು ಹೇಳಿದರು.
