ಇಂಡಿ | ಡಾ. ಬಿ ಆರ್ ಅಂಬೇಡ್ಕರ್ ಬದುಕು, ಜೀವನಶೈಲಿ, ಕೊಡುಗೆ ಎಲ್ಲರಿಗೂ ಸ್ಫೂರ್ತಿ : ಎಸಿ ಅನುರಾಧಾ
ಇಂಡಿ : ಡಾ ಬಿ ಆರ್ ಅಂಬೇಡ್ಕರ್ ಅವರ ಬದುಕು, ಜೀವನಶೈಲಿ, ಅವರ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ. ಅವರ ಕೊಡುಗೆ ಭಾರತ ಜನತೆಯ ಒಂದು ರೀತಿ ಜೀವನಾಡಿ ಇದ್ದಂತೆ. ಅವರ ಬೃಹತ್ ಮತ್ತು ಸೂಕ್ಷ್ಮ ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವೂ ಸುಲಭ ಹಾಗೂ ಸುಗಮವಾಗಿದೆ ಎಂದು ಅಧ್ಯಕ್ಷತೆ ವಹಿಸಿದ ಕಂದಾಯ ಉಪವಿಭಾಗ ಅಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಪಟ್ಟಣದ ಶಿಕ್ಷಣ ಇಲಾಖೆಯ ಗುರುಭವನದಲ್ಲಿ ತಾಲ್ಲೂಕು ಆಡಳಿತವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ 134 ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪರ್ಚಾಣೆ ನೆರಿವೆರಿಸಿ ತದನಂತರ ಜ್ಯೋತಿ ಬೆಳೆಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಜನ್ಮದಿನ. ಅವರ ಕೊಡುಗೆಗಳನ್ನು ನೆನೆದು ಸ್ಮರಿಸುವ ದಿನ. ಅವರನ್ನು ಗೌರವಿಸುವ ಸುದಿನ. ಇಂದಿನ ಪ್ರಜೆಗಳು ಅವರ ಸಂದೇಶಗಳನ್ನು ತಿಳಿದು, ಸದಾ ಅನುಸರಿಸಬೇಕಾಗಿದೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಪ್ರೌಢಶಾಲೆಯ ಸಹಶಿಕ್ಷಕ ಆರ್.ಬಿ.ಬಿರಾದಾರ ಮಾತನಾಡಿ ಶಿಕ್ಷಣ ಹಕ್ಕು, ಉದ್ಯೋಗ ಹಕ್ಕು, ಮಾಹಿತಿ ಹಕ್ಕು, ಅಹಾರ ಭದ್ರತೆಯ ಹಕ್ಕು, ಬಾಳುವ ಹಕ್ಕು, ಆದಿವಾಸಿಗಳಿಗೆ ಸಂಪನ್ಮೂಲ ಸಂಗ್ರಹಿಸುವ ಹಕ್ಕು, ಈ ಎಲ್ಲದರ ಹಿಂದೆ ಕೆಲಸ ಮಾಡಿರುವದು ಅಂಬೇಡಕರರವರು, ಮಹಿಳೆಯರು, ದಲಿತರು, ಶೂದ್ರರು, ಕೃಷಿಕರು, ಕಾರ್ಮಿಕರು, ಸೇರಿದಂತೆ ಎಲ್ಲ ಶ್ರೀ ಸಾಮಾನ್ಯರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಮಾತನಾಡಿದವರು ಅಂಬೇಡಕರರವರು, ಕೃಷಿ ಬದುಕು, ಭೂ ಒಡೆತನ, ನೀರಾವರಿ ಕೈಗಾರಿಕೆಗಳ ಸ್ಥಿತಿಗತಿ ಬಗ್ಗೆ ಅಂಬೆಡಕರರವರು ಸ್ವಾತಂತ್ರö್ಯ ಪೂರ್ವದಲ್ಲಿಯೇ ಚಿಂತಿಸಿದ್ದಾರೆ. ಈ ಎಲ್ಲ ಒಳಗೊಂಡಿರುವ ಅರ್ಥಶಾಸ್ತçದ ಬಗ್ಗೆಯೂ ಬಾಬಾ ಸಾಹೇಬರು ಪ್ರಗತಿಪರ ವಿಚಾರಧಾರೆ ಮುಂದಿಟ್ಟಿದ್ದಾರೆ ಎಂದರು.
ರಮೇಶ ನಿಂಬಾಳಕರರವರು ಮಾತನಾಡಿ ಭಾರತದ ಸಂವಿಧಾನ ನಿರ್ಮಾತೃ ಅಂಬೇಡಕರ ದಮನಿರತರ ದನಿಯಾಗಿದ್ದರು. ಸಮಾನತೆಗೆ ಶ್ರಮಿಸಿದರು. ೨೦ ನೇ ಶತಮಾನ ಭಾರತ ಸೃಜಿಸಿದ ಮಹಾನ ದಾರ್ಶನಿಕ ಎಂದರು.
ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ ಸ್ವಾಗತಿಸಿದರು. , ಬಸವರಾಜ ಗೊರನಾಳ ನಿರೂಪಿಸಿದರು.
ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಇಒ ನಂದೀಪ ರಾಠೋಡ, ಪ್ರಶಾಂತ ಕಾಳೆ, ಇಲಿಯಾಸ ಬೋರಾಮಣಿ, ಭೀಮಣ್ಣ ಕೌಲಗಿ, ಟಿ.ಎಸ್.ಅಲಗೂರ, ಜಾವೇದ ಮೋಮಿನ್, ವಿನಾಯಕ ಗುಣಸಾಗರ, ಭೀಮಾಶಂಕರ ಮೂರಮನ, ಶೇಖರ ಶಿವಶರಣ, ಧರ್ಮರಾಜ ಸಾಲೋಟಗಿ, ಬಾಬು ಗುಡುಮಿ, ಮತ್ತಿತರಿದ್ದರು.
ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈದಕ್ಕೂ ಮೊದಲು ಪ್ರವಾಸಿ ಮಂದಿರದಿಂದ ಭಾವಚಿತ್ರದ ಮೆರವಣೆಗೆ ಅಂಬೇಡಕರ ವೃತ್ತದಿಂದ ಮಹಾವೀರ ವೃತ್ತ, ಬಸವೇಶ್ವರ ವೃತ್ತದ ಮೂಲಕ ಗುರುಭವನ ತಲುಪಿ ಅಲ್ಲಿ ಕಾರ್ಯಕ್ರಮ ನಡೆಯಿತು.
ಇಂಡಿ ಪಟ್ಟಣದ ಗುರು ಭವನದಲ್ಲಿ ನಡೆದ ಅಂಬೇಕರ ಜಯಂತಿ ಕಾರ್ಯಕ್ರಮದಲ್ಲಿ ಎಸಿ ಅನುರಾಧಾ ವಸ್ತçದ ಮಾತನಾಡಿದರು.




















