ಇಂಡಿ : ಸಮಾಜದಲ್ಲಿ ಅಶಾಂತಿ ಸೃಷಿಸುವ ಹಾಗೂ ಕಾನೂನು ಸುವ್ಯವಸ್ಥಿತ ಕೆಡಿಸುವ ಕಿಡಿಗೇಡಿಗಳಿಗೆ, ಪುಡಿ ರೌಡಿಗಳಿಗೆ ಎಡೆಮುರಿ ಕಟ್ಟಿ, ಅಕ್ರಮ ಚಟುವಟಿಕೆ, ಅಪರಾದ ತಡೆಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಉತ್ತರ ವಲಯ ಬೆಳಗಾವಿ ಪೋಲಿಸ್ ಮಹಾ ನಿರ್ದೇಶಕ ಚೇತನಸಿಂಗ್ ರಾಠೋರ್ (ಐಪಿಎಸ್) ಖಡಕವಾಗಿ ಸೂಚಿನೆ ನೀಡಿದ್ದಾರೆ.
ಇಂಡಿ ಪಟ್ಟಣದಲ್ಲಿರುವ ಗ್ರಾಮೀಣ ಪೋಲಿಸ್ ಠಾಣಾಗೆ ಬೇಟಿ ನೀಡಿದ ಅವರು, 2024- 25 ನೇ ಸಾಲಿನ ಅಪರಾಧ ಪ್ರಕರಣಗಳ ಬಗ್ಗೆ ಹಾಗೂ ಕಛೇರಿ ಪರಿವೀಕ್ಷಣೆ ಮಾಡಿ ಮಾತನಾಡಿದರು.
ಈ ಭಾಗದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಅವುಗಳ ಬಗ್ಗೆ ನಿಗಾವಹಿಸಿ ಅಪರಾಧದಲ್ಲಿ ತೊಡಗಿಕೊಂಡವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಇನ್ನೂಸಣ್ಣಪುಟ್ಟ ಪುಡಿ ರೌಡಿಗಳು ಹುಡುಗಿಯರ ಚುಡಾಯಿಸುವುದು, ಸಣ್ಣ ಮಟ್ಟದಲ್ಲಿ ಗ್ರಾಮದಲ್ಲಿ ಹವಾ ಮೇಂಟೈನ್ ಮಾಡುವಂತವರು, ಸಾರ್ವಜನಿಕ ಪ್ರದೇಶದಲ್ಲಿ ಭಯ ಹುಟ್ಟಿಸುವವರು ವಿರುದ್ಧ ಹಾಗೂ ಅಕ್ರಮ ಚಟುವಟಿಕೆ, ಕಾನೂನು ಬಾಹಿರ ಕೃತ್ಯ ನಡೆಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನಾತ್ಮಕವಾಗಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇನ್ನೂ ಸಾರ್ವಜನಿಕರ ಭದ್ರತೆಯ ದೃಷ್ಟಿಯಿಂದ ನಗರದಲ್ಲಿ ರಾತ್ರಿಯ ವೇಳೆ ಪೊಲೀಸ್ ಬೀಟ್ ವ್ಯವಸ್ಥೆ, ಪೆಟ್ರೊಲಿಂಗ್ ವ್ಯವಸ್ಥೆ ಕಲ್ಪಿಸಬೇಕು. ಎ ಹಳ್ಳಿಗಳ ಮಾಹಿತಿ ಹಾಗೂ ಯು ವಾಯ್ ಪ್ರಕರಣಗಳ ತ್ವರಿತ ವಿಲೇವಾರಿ ಮಾಡಲು ತಿಳಿಸಿದರು.
ಸಮಾಜದಲ್ಲಿ ಶಾಂತಿ. ಭದ್ರತೆ, ರಕ್ಷಣೆಯ ಕರ್ತವ್ಯಗಾರಿಕೆ ಪೊಲೀಸ್ ಇಲಾಖೆಯದ್ದಾಗಿದೆ. ಪೊಲೀಸರು ಸಾರ್ವಜನಿಕರ ಸೇವೆಗೆ ಸದಾ ಸಿದ್ಧವಾಗಿರಬೇಕು. ಸಮಾಜ ವಿರೋಧಿ ಚಟುವಟಿಕೆಗಳ ನಿಯಂತ್ರಣ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳ ರಕ್ಷಣೆ ಹಾಗೂ ಸಮಾಜದ ಜೀವನ ಮಟ್ಟದ ಸುಧಾರಣೆ ಸಮಾಜವನ್ನು ಉತ್ತಮ ಸ್ಥಿತಿಯಲ್ಲಿಡಲು ಪೂರಕವಾಗುವಂತೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.
ಅದಲ್ಲದೇ ಠಾಣಾ ಆವರಣದಲ್ಲಿಸಸಿಗಳನ್ನು ನೆಟ್ಟರು, ಆ ನಂತರ ಪೋಲಿಸರಿಂದ ಪಥ ಸಂಚಲನ ಮಾಡಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಶಂಕರ ಮಾರಿಹಾಳ, ಪೊಲೀಸ್ ಉಪಾದಿಕ್ಷಕರು ಇಂಡಿ ಉಪವಿಭಾಗ ಜಗದೀಶ್ ಎಚ್ ಎಸ್, ಇಂಡಿ ಗ್ರಾಮೀಣ ವೃತ್ತ ಸಿಪಿಐ ಎಮ್ ಎಮ್ ಡಪ್ಪಿನ, ಪಿ ಎಸ್ ಐ ಮಹೇಶ ಸಂಖ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.