ವಿಜಯಪುರ: ಅನೈತಿಕ ಸಂಬಂಧಕ್ಕಾಗಿ ಗಂಡನ ಹತ್ಯೆಗೈದಿರುವ ಹೆಂಡತಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದ ಸಾಯಿ ಪಾರ್ಕ್ ಬಳಿ ನಡೆದಿದೆ. ರಾಜೇಶ್ವರಿ ಹಳ್ಳಿ, ರವಿ ತಳವಾರ, ಗುರಪ್ಪ ದಳವಾಯಿ ಬಂಧಿತ ಆರೋಪಿಗಳು. ಇನ್ನು ಪ್ರಕಾಶ ಹಳ್ಳಿಯನ್ನು ಹೆಂಡತಿ ರಾಜೇಶ್ವರಿ, ಸಹಚರರು ಸೇರಿಕೊಂಡು ಹತ್ಯೆಗೈದಿದ್ದರು. ಆರೋಪಿಗಳ ವಿಚಾರಣೆ ವೇಳೆಯಲ್ಲಿ ಮಾಹಿತಿ ಸಿಕ್ಕಿದೆ. ಕೊಲೆಗಾರ ವಿರುದ್ಧ 302, ಸ/ಕ 34 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿದೆ. ಈ ಕುರಿತು ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.