VOJ ನ್ಯೂಸ್ ಡೆಸ್ಕ್: ಸಣ್ಣ ವಿಷಯಕ್ಕೆ ಮಾವ ಮತ್ತು ಸೊಸೆಯ ಮದ್ಯೆ ಗಲಾಟೆ ನಡೆದು ಸೊಸೆಯ ಪ್ರಾಣಪಕ್ಷಿ ಹಾರಿದ ಘಟನೆ ಜರುಗಿದೆ. ಬೆಳಗಿನ ಉಪಾಹಾರ ಕೊಟ್ಟಿಲ್ಲಾ ಎಂಬ ಕಾರಣಕ್ಕೆ ಮಾವ ಸೊಸೆಗೆ ಗುಂಡಿಕ್ಕಿ ಕೊಂದ ಘಟನೆ ಮಹಾರಾಷ್ಟ್ರದ ಥಾಣೆಯ ರಾಬೋಡಿಯಲ್ಲಿ ನಡೆದಿದೆ. ಸೊಸೆ ಸೀಮಾ ಪಾಟೀಲ್, ಉಪಾಹಾರ ನೀಡಲಿಲ್ಲ ಎಂದು ಆಕೆಯ ಮಾವ ಕಾಶೀನಾಥ ಸಿಟ್ಟಿನಲ್ಲಿ ಗುಂಡು ಹಾರಿಸಿದ್ದಾರೆ. ಅದಕ್ಕೂ ಮುಂಚೆ ಅವರಿಬ್ಬರ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಗುಂಡಿನ ಏಟಿಗೆ ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ರಬೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬದುಕಿ ಬಾಳಬೇಕಾಗಿದ್ದ ಜೀವ ಒಂದು ಬಾರದ ಲೋಕಕ್ಕೆ ತೆರಳಿರುವದು ವಿಪರ್ಯಾಸ.