ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತು ನಾಶ..!
ವಿಜಯಪುರ: ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಮಾದಕ ವಸ್ತುಗಳು ಜಪ್ತಿಗೈದು ನಾಶ ಪಡಿಸಿರುವ ಘಟನೆ ವಿಜಯಪುರ ನಗರದ ಇಂಡಿ ರಸ್ತೆಯಲ್ಲಿರುವ ಕೆಪಿಎಂಪಿ ಟ್ರಸ್ಟ್ನಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ 32 ಕೇಸ್ ದಾಖಲು ಮಾಡಿದ್ದಾರೆ. 32 ಕೇಸ್ಗಳಲ್ಲಿ 32,15,450 ಮೌಲ್ಯದ 202 ಕೆಜಿ 380 ಗ್ರಾಂ ಮಾದಕ ವಸ್ತುಗಳು ವಶಪಡಿಸಿಕೊಂಡು, ಎಸ್ಪಿ ಋಷಿಕೇಸ್ ಸೋನವಾಣೆ ನೇತೃತ್ವದಲ್ಲಿ ನಾಶ ಪಡಿಸಲಾಗಿದೆ.