ನಾಟಕಗಳು ಸಾಮಾಜಿಕ ಮೌಲ್ಯ ಕಾಪಾಡುವ ಸಾಧನ: ಹಾಸಿಂಪೀರ ವಾಲಿಕಾರ
ಇಂಡಿ : ನಾಟಕಗಳು ಸಾಮಾಜಿಕ ಮೌಲ್ಯ ಕಾಪಾಡುವ ಸಾಧನಗಳು. ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಗುಣಮಟ್ಟದ ನಾಟಕಗಳಿಗೆ ಪ್ರೇಕ್ಷಕರ ಬೆಂಬಲ ದೊರಕುತ್ತದೆ ಎಂದು ಪೋಲಿಸ ವೃತ್ತ ನಿರೀಕ್ಷಕ ಜ್ಯೋತಿಲಿಂಗ ಹೊನಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಶುಕ್ರವಾರ ರಾತ್ರಿ ತಾಲ್ಲೂಕಿನ ತಾಂಬಾ ಗ್ರಾಮದ ಸಮೀಪದ ಹರಳಯ್ಯನಹಟ್ಟಿ ಗ್ರಾಮದ ಏಳುಮಕ್ಕಳ ತಾಯಿ ಜಾತ್ರೆಯ ನಿಮಿತ್ತ ರೆಬಿನಾಳ ಗ್ರಾಮದ ಶ್ರೀ ಬಸವೇಶ್ವರ ಕಲಾ ಸಂಘ ಅಭಿನಯಿಸಿದ ಶಿವಶರಣೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ನಾಟಕ ಉದ್ಘಾಟಿಸಿ ಮಾತನಾಡುತ್ತ ಇತ್ತಿಚಿಗೆ ನಾಟಕಗಳ ಪ್ರದರ್ಶನ ಕುಂಠಿತಗೊಳ್ಳುತ್ತಿವೆ. ಇಂದು ನಾಟಕಗಳಿಗೆ ಸಾವ೯ಜನಿಕರು ಪ್ರೋತ್ಸಾಹಿಸುವ ಅವಶ್ಯಕತೆಯಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ರಂಗಭೂಮಿ ಕಲಾವಿದರು ಉತ್ತಮ ನಾಟಕಗಳ ಪ್ರದರ್ಶನ ನೀಡಬೇಕು. ಚಿತ್ರ ನಟರೆಲ್ಲರೂ ನಾಟಕ ಪ್ರದರ್ಶನ ಮಾಡಿ ಸಿನೆಮಾ ಕ್ಷೇತ್ರಕ್ಕೆ ಬಂದವರು. ಇಂದು ನೀನಾಸಂ. ರಂಗಾಯಣ. ಜಮೂರಾ ಮುಂತಾದ ನಾಟಕ ಸಂಸ್ಥೆಗಳು ಗುಣಮಟ್ಟದ ನಾಟಕಗಳನ್ಣು ನೀಡಿ ಅತ್ಯುತ್ತಮ ಹೆಸರು ಮಾಡಿಕೊಂಡಿದ್ದಾರೆ. ಇಂದಿಗೂ ಗ್ರಾಮೀಣರ ಮನರಂಜನೆ ನಾಟಕಗಳಾಗಿವೆ. ಸರ್ಕಾರ ನಾಟಕ ಕಂಪನಿಗಳಿಗೆ ಹಾಗು ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.
ವೇದಿಕೆ ಮೇಲೆ ಮಹಾದೇವ ಬಿರಾದಾರ. ಸ್ವಾಮಿಗೌಡ ಬಿರಾದಾರ. ಸಿದ್ರಾಮಯ್ಯ ಮೇತ್ರಿ. ಶಿವಪ್ಪ ಹೊನಕಟ್ಟಿ. ಜಠ್ಠೆಪ್ಪ ಮೇತ್ರಿ ವಿಶ್ವನಾಥ ಹೊನಕಟ್ಟಿ ರಾಹುಲ ಚವ್ವಾಣ. ಅಪ್ಪು ಇಂಡಿ. ಮುತಾದವರು ಉಪಸ್ಥಿತರಿದ್ದರು.
ತಾಂಬಾ ಸಮೀಪದ ಹರಳಯ್ಯನಹಟ್ಟಿ ಗ್ರಾಮದ ಏಳುಮಕ್ಕಳ ತಾಯಿ ಜಾತ್ರೆಯ ನಿಮಿತ್ತ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನವನ್ನು ಪೋಲಿಸ ವೃತ್ತ ನಿರೀಕ್ಷಕ ಜ್ಯೋತಿಲಿಂಗ ಹೊನಕಟ್ಟಿ ತಬಲಾ ಬಾರ್ಸೋ ಮೂಲಕ ಚಾಲನೆ ನೀಡುತ್ತಿರುವುದು.



















