ಅಫಜಲಪುರ: ತಾಲೂಕಿನ ಮಣ್ಣೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುದೀರ್ಘವಾಗಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ಮಲ್ಲಪ್ಪ ಚಲವಾದಿ ಅವರ ಬೀಳ್ಕೊಡುಗೆ ಸಮಾರಂಭ ಅದ್ದೂರಿಯಾಗಿ ಜರುಗಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಆರತಿ ಬಸವರಾಜ ಜನ್ನಾ ಹಾಗೂ ಗ್ರಾ,ಪಂ ಮಾಜಿ ಅಧ್ಯಕ್ಷ ರಮೇಶ ಧೂಳಪ್ಪ ಬಾಕೆ ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ ಬಾಕೆ ಮಾತನಾಡಿ ಶಿಕ್ಷಕ ಮನಸ್ಸು ಮಾಡಿದರೆ ಏನಾದರೂ ಸಾಧಿಸ ಬಹುದು ಎಂಬುದಕ್ಕೆ ಚಲವಾದಿ ಸರ್ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು. ಮುಖಂಡರಾದ ಅಪ್ಪಾಸಾಬ ಹೊಸೂರಕರ ಮಾತನಾಡಿ ಮಲ್ಲಪ್ಪ ಚಲವಾದಿ ಅವರು, ಶಾಲೆಯಲ್ಲಿ ಪಾಠ ಪ್ರವಚನದ ಜೊತೆಗೆ, ಗ್ರಾಮಸ್ಥರೊಂದಿಗೆ, ಅನ್ಯೋನ್ಯವಾಗಿದ್ದು ಮಕ್ಕಳನ್ನು ಶೈಕ್ಷಣಿಕ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಪ್ರತಿಯೊಬ್ಬರ ಪ್ರೀತಿ, ಸ್ನೇಹಕ್ಕೆ ಪಾತ್ರರಾಗಿದ್ದರು. ಅವರ ವರ್ಗಾವಣೆಯಿಂದ ಗ್ರಾಮಕ್ಕೆ ನಷ್ಟವಾಗಿದೆ’ಎಂದು ವಿಷಾದಿಸಿದರು.
ವರ್ಗಾವಣೆಗೊಂಡ ಶಿಕ್ಷಕ ಮಲ್ಲಪ್ಪ ಚಲವಾದಿ ಮಾತನಾಡಿ, ಗ್ರಾಮಸ್ಥರ ಹಾಗೂ ಸಹೊದ್ಯೋಗಿಗಳ ಸಹಕಾರ ಎಂದಿಗೂ ಮರೆಯುವಂತಿಲ್ಲ. ಪ್ರತಿಯೊಂದು ಶಾಲಾ ಚಟುವಟಿಕೆಗಳಿಗೆ ಸಲಹೆ, ಸಹಕಾರ ನೀಡಿದ್ದಾರೆ. ಊರು ಬಿಟ್ಟು ಹೋಗಲು ಮನಸು ಇಲ್ಲ ಎಂದು ಆನಂದಬಾಷ್ಪ ಹರಿಸಿದರು.
ಇದೇ ಸಂದರ್ಭದಲ್ಲಿ 2021-22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾದ ಹತ್ತು ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಿ ಚೆಕ್ ವಿತರಿಸಲಾಯಿತು. ಹಾಲಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬೋರಮ್ಮ ಕುಂಬಾರ, ಕಾರ್ಯದರ್ಶಿ ನಾರಾಯಣ ಚವ್ಹಾಣ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸುರೇಶ ಕೋರಚಗಾಂವ ಎಸ್ ಡಿ ಎಂ ಸಿ ಅದ್ಯಕ್ಷ ವಿಠ್ಠಲ ಅಲ್ಲಾಪೂರ ಗ್ರಾ,ಪಂ ಸದಸ್ಯರಾದ ಬಸವರಾಜ ವಾಯಿ,ರಿಯಾಜ ಲಾಳಸಂಗಿ ರಾಮನಗರ ಗ್ರಾ,ಪಂ. ಸದಸ್ಯ ಶಾವರಸಿದ್ದ, ಜಮಾದಾರ, ಮುಖಂಡರಾದ ಅಪ್ಪಾಸಾಬ ಹೊಸೂರಕರ ಮಲಕಣ್ಣ ಹೊಸೂರಕರ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಪುಂಡಲೀಕ ಕಟ್ಟಿ, ಚಂದು ಹಿರೇಕುರುಬರ ಬಸವರಾಜ ಜನ್ನಾ,ಕಲ್ಲಪ್ಪ ಅಲ್ಲಾಪೂರ ಮಲ್ಲಿಕಾರ್ಜುನ ಭತಗುಣಕಿ ಮಹಾದೇವ ಪ್ಯಾಟಿ ಶ್ರೀಕಾಂತ ಮುಜಗೊಂಡ ನಂದೇಶ ಪ್ಯಾಟಿ, ಶ್ರೀಶೈಲ ಚಿನಮಳ್ಳಿ, ರಮೇಶ ಮಾಂಗ ಗಡ್ಡೆಪ್ಪ ಬಸ್ಸಿನಕರ, ದತ್ತಾತ್ರೇಯ ಮಾತನಳ್ಳಿ ಶ್ರೀಕಾಂತ ನಿವರಗಿ, ಸರ್ಕಾರಿ ಮಾದರಿ ಶಾಲೆ ಮುಖ್ಯ ಗುರು ವಿಶ್ವನಾಥ ರೋಡಗಿ, ಗೈಬುಸಾಬ ಆಳಂದ ಚನ್ನನಗೌಡ ಮಾಲಿಪಾಟೀಲ, ಮರೆಪ್ಪ ಸಿಂದೆ ಶ್ರೀಶೈಲ ಸನದಿ ಅಲ್ಲಾಬಕ್ಷ ಚೌಧರಿ ರಾಯಗೊಂಡಪ್ಪ ಅಂಜುಟಗಿ ದತ್ತಪ್ಪ ಡೊಂಬಾಳೆ, ಭಾಗೀರಥಿ ಬಿರಾದಾರ,ಶೈಲಾ ಎಚ್ ಎಸ್, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.