VOJ ನ್ಯೂಸ್ ಡೆಸ್ಕ್: ಸಂಭವಾಮಿ ಸೇವಾ ಟ್ರಸ್ಟ್ ನಿಂದ ಲೋಕ ಕಲ್ಯಾಣಕ್ಕಾಗಿ ಶ್ರೀರಾಮ ತಾರಕ ಜಪಯಜ್ಞ ಕಾರ್ಯಕ್ರಮವನ್ನು ಉಡುಪಿಯ ಸಾಸ್ತಾನದ ಕೋಡಿ ಕನ್ಯಾಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 15, 2022 ರ ಶುಕ್ರವಾರ ದಂದು
ಸ್ವಸ್ತಿ ಶ್ರೀ ಶುಭಕೃತ ನಾಮ ಸಂವತ್ಸರದ ಮೇಷ ಮಾಸ ಚೈತ್ರ ಶುಕ್ಲ ಪೂರ್ಣಿಮಾ ತಿಥಿ ಸಂಜೆ 5:00 ಗಂಟೆಗೆ ವೇದಮೂರ್ತಿ ತಲ್ಲೂರು ವಿಶ್ವನಾಥ ಭಟ್ಟರ ಪೌರೋಹಿತ್ಯದಲ್ಲಿ ಗೋ ಪೂಜೆ, ಗಂಗಾ ಪೂಜೆ, ಯಾಗ ಶಾಲಾ ಪ್ರವೇಶ ಹಾಗೂ ಅಷ್ಟಾವಧಾನ ಸಂಕಲ್ಪ ಕಾರ್ಯ ನಡೆಯಲಿದೆ.
ಈ ಪವಿತ್ರ ಕಾರ್ಯಕ್ಕೆ ಭಾರತದ ಮೂರು ಪ್ರಮುಖ ಸಾಗರ, ಹಿಂದೂಗಳ ಪವಿತ್ರ ಸಪ್ತ ನದಿಗಳು ಹಾಗೂ ಕರ್ನಾಟಕದಲ್ಲಿ ಹರಿಯುವ 21 ಪುಣ್ಯ ನದಿಗಳ ಪವಿತ್ರ ಜಲದೊಂದಿಗೆ ಪೂರ್ಣ ಕುಂಭ ಸಹಿತ ಬೃಹತ್ ಮೆರವಣಿಗೆಯ ಮೂಲಕ ಯಾಗ ಶಾಲಾ ಪ್ರವೇಶ ನಡೆಯಲಿದೆ.
ಅಲ್ಲದೆ ಬೈಕ್ ಜಾಥಾ, ಸುವಾಸಿನಿಯರ ಪೂರ್ಣ ಕುಂಭ
ಮೆರವಣಿಗೆ, ಪುಟಾಣಿ ರಾಮ ಸೀತಾ, ಹನುಮರ ಚಿಲಿಪಿಲಿ ನಡುವೆ ಬೃಹತ್ ಮೆರವಣಿಗೆಯೊಂದಿಗೆ ಮೊದಲ
ಬಾರಿ ಉಡುಪಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಲಿದ್ದಾರೆ.
ಇನ್ನು ಐತಿಹಾಸಿಕ ಕಾರ್ಯಕ್ರಮಕ್ಕೆ ಸಕಲ ಹಿಂದೂ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಭವಾಮಿ ಸೇವಾ ಫೌಂಡೇಶನ್ ಮನವಿ ಮಾಡಿದೆ.