ಎಸ್.ಡಿ.ಎಮ್.ಸಿ ಅಧ್ಯಕ್ಷೆಯಾಗಿ ಚೈತನ್ಯ ರೇವರಕರ ಆಯ್ಕೆ
ಇಂಡಿ : ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಕೆಬಿಎಮ್ ಪಿ ಎಸ್ ನಂ-02 ಶಾಲೆಯಲ್ಲಿ ನೂತನ ಎಸ್.ಡಿ.ಎಮ್.ಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ನಡೆಯಿತು.
ಈ ಸಭೆಯಲ್ಲಿ ಸಮಿತಿಯ ಅಧ್ಯಕ್ಷೆಯಾಗಿ ಚೈತನ್ಯ ರೇವರಕರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹಾಗೂ ಉಪಾಧ್ಯಕ್ಷೆಯಾಗಿ ಪವಿತ್ರ ಸಚೀನ ಬೊಳೆಗಾಂವ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಚೈತನ್ಯ ರೇವರಕರ ಅವರು ಮಾತನಾಡಿ, ಯಾವುದೇ ದೇಶ ಅಥವಾ ಪ್ರದೇಶ ಬದಲಾವಣೆ ಕಾಣಬೇಕಾದರೆ, ಪ್ರಗತಿಯಾಗಬೇಕಾದರೆ ಅಲ್ಲಿನ ಶಿಕ್ಷಣ ಕಾರಣವಾಗುತ್ತೆ. ಅದರಂತೆ ನಮ್ಮ ಶಾಲೆ ಯಲ್ಲಿಯೂ ಪ್ರಗತಿ ಕಾಣಬೇಕಾದರೆ, ಪಾಲಕರ ಸಹಕಾರ ಅತ್ಯಗತ್ಯವಾಗಿದೆ. ಹಾಗೆ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ವ್ಯವಸ್ಥಿತವಾಗಿ ಕಾರ್ಯನಿರತವಾಗಬೇಕಾಗಿದೆ. ಹಾಗಾಗಿ ಶಿಕ್ಷಣವೇ ಶಕ್ತಿಯಾಗಿ ಪರಿವತ೯ನೆಯಾಗಬೇಕು. ಆ ಕೆಲಸವನ್ನು ನಾವು-ನೀವು ಬೆಂಬಲಿಸಬೇಕು. ಆಯ್ಕೆ ಮಾಡಿದ ತಮ್ಮೆಲ್ಲರಿಗೂ ತುಂಬುಹೃದಯದ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಭೀಮಾಶಂಕರ ಮೂರಮನ ಪ್ರಶಾಂತ ಕಾಳೆ, ಸುನೀಲ ಕಾಲೇಬಾಗ, ಸಿದ್ಧಾಥ೯ ಹಳ್ಳದಮನಿ, ಕೇತನ ಕಾಲೇಬಾಗ, ಮಿಲಿಂದ ಹೊಸಮನಿ, ರವಿಕುಮಾರ ಸಿಂಗೆ, ಅಂಬಣ್ಣ ಭಾವಿಕಟ್ಟಿ, ಪರಶುರಾಮ ಕಟ್ಟಿಮನಿ, ಸಚೀನ ಬೊಳೆಗಾಂವ,ಅವಿನಾಶ ಕಾಲೇಬಾಗ ಇತರರು ಉಪಸ್ಥಿತರಿದ್ದರು.



















