ಭೀಮೆಯ ಧೂಳಖೇಡ ಚೆಕ್ ಪೊಸ್ಟ್ ನಲ್ಲಿ ಕಂತೆ ಕಂತೆ ನಗದು ಜಪ್ತಿ..!
ಚಡಚಣ : ದಾಖಲೆ ಇಲ್ಲದೇ ಹಣ ಸಾಗಾಟ ಯತ್ನದ ಹಿನ್ನೆಲೆ 49 ಲಕ್ಷ ರೂಪಾಯಿ ಸೀಜ್ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ಈ ಘಟನೆ ನಡೆದಿದೆ.
ಮಹಾರಾಷ್ಟ್ರದ ಸೋಲಾಪುರದಿಂದ ವಿಜಯಪುರ ಜಿಲ್ಲೆಯ ಇಂಡಿಗೆ ಕ್ಯಾಂಟರನಲ್ಲಿ ಹಣ ಸಾಗಿಸುತ್ತಿದ್ದರು. ಚಾಲಕ ತನ್ನ ಕಾಲ ಕೆಳಬಾಗದಲ್ಲಿ ಭಾಗಿನ್ನಿಟ್ಟು ಇಟ್ಟುಕೊಂಡಿದ್ದು ಅದರಲ್ಲಿರುವ ಹಣ ಜಪ್ತಿಗೈದಿದ್ದಾರೆ. ಪಟ್ಟಣದ ಎಪಿಎಂಸಿ ವರ್ತಕ , ಅಡತಿ ಮಾಲೀಕ ಮಂಜುನಾಥ ಎಂಬುವರಿಗೆ ಸೇರಿದ ನಗದು. ಝಳಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಡಿವಾಯ್ ಎಸ್ಪಿ ಚಂದ್ರಕಾಂತ್ ನಂದರೆಡ್ಡಿ ಮತ್ತು ಸಿಪಿಐ ಎಸ್ ಎಮ್ ಬಡೇದಾರ ಪರಿಶೀಲನೆ ನಡೆಸಿದ್ದಾರೆ.