ಇಂಡಿಯಲ್ಲಿ ಬಸನಗೌಡ ಅಭಿಮಾನಿಗಳು ಪಂಜಿನ ಮೆರವಣಿಗೆ
ಇಂಡಿ : ಉತ್ತರ ಕರ್ನಾಟಕದ ಗಟ್ಟಿ ಧ್ವನಿ, ಹಿಂದು ಪೈಯರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆ ಆಗ್ರಹಿಸಿ ಪಂಜಿನ ಮೆರವಣಿಗೆ ಬಸನಗೌಡ ಅಭಿಮಾನಿ ಬಳಗದವರು ಮಾಡಿದರು.
ಸೋಮವಾರ ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ವೃತ್ ದಲ್ಲಿ ಪಂಜಿನ ಮೆರವಣಿಗೆ ಪ್ರಾರಂಭಿಸಿ ಶ್ರೀಧರ ಕ್ಷೇತ್ರಿ ಮಾತನಾಡಿದ ಅವರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆಯಿಂದ ರಾಜ್ಯದ ಜನರಿಗೆ ನೋವಾಗಿದೆ. ಹೀಗಾಗಿ ಕೇಂದ್ರದ ಬಿಜೆಪಿ ಹಿರಿಯ ನಾಯಕರು ಪುನರ್ ಪರಿಶೀಲಿಸಿ ಯತ್ನಾಳ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಆಗ್ರಹಿಸಿದರು.
ಬಿಜೆಪಿಯಿಂದ ಮಾತ್ರ ಹಿಂದುತ್ವದ ರಕ್ಷಣೆ ಎಂಬುದನ್ನು ಮೊದಲಿನಿಂದಲೂ ನಂಬಿದ್ದೇವೆ. ಬಸನಗೌಡ ಪಾಟೀಲ ಹಿಂದುತ್ವದ ಪರ ಮಾತನಾಡುವ ಗಟ್ಟಿ ಧ್ವನಿ ಹೊಂದಿರುವ ವ್ಯಕ್ತಿ. ಇದೀಗ ಉಚ್ಚಾಟನೆಯಿಂದ ಹಿಂದುಗಳಿಗೆ ನೋವಾಗುವುದು ಸಹಜ. ಹೀಗಾಗಿ ಅವರ ಉಚ್ಚಾಟನೆಯನ್ನು ಪರಿಶೀಲಿಸಿ ಪಕ್ಷ ಸಂಘಟನೆಗೆ ಅವಕಾಶ ನೀಡಬೇಕು ಎಂದು ಹೇಳಿದರು. ಇನ್ನೂ ಪಂಜಿನ ಮೆರವಣಿಗೆ ನಗರದ ಪ್ರಮುಖ ವೃತ್ ದ ಮೂಲಕ ಶಾಂತೇಶ್ವರ ದೇವಸ್ಥಾನದವರೆಗೆ ನಡೆಯುತ್ತದೆ ಎಂದು ಹೇಳಿದರು.



















