ಬದುಕಿನ ಸ್ವಾರ್ಥಕತೆಗೆ ಶರಣರ ತತ್ವಗಳನ್ನು ಅಳವಡಿಸಿ
ಇಂಡಿ : ೧೨ ನೆಯ ಶತಮಾನದ ಶರಣರ ವಿಚಾರ ಧಾರೆಗಳನ್ನು ಅಂದಿನ ಅನುಭವ ಮಂಟಪ ಭಕ್ತ ಸಮೂದಾಯಕ್ಕೆ ತಲುಪಿಸಿದಂತೆ ಅಥರ್ಗಾದ ಷಣ್ಮುಖಾರೂಢ , ಈರಯ್ಯ ಶ್ರೀಗಳು ಮತ್ತು ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಶ್ರೀಗಳ ಚಿಂತನೆಗಳನ್ನು ಇಂದಿನ ಜನ ಸಮುದಾಯಕ್ಕೆ ಮುಟ್ಟಿಸುವ ಕಾರ್ಯ ಆಗಬೇಕು, ಜನ ಸಾಮಾನ್ಯರು ಬದುಕಿನ ಸ್ವಾರ್ಥಕತೆಗೆ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಬೇಕೆಂದು ಕಾಗವಾಡದ ಯತಿಶ್ವಾರಾನಂದ ಶ್ರೀಗಳು ಹೇಳಿದರು.
ಅವರು ತಾಲೂಕಿನ ಅಥರ್ಗಾ ಗ್ರಾಮದ ಶ್ರೀ ಷಣ್ಮುಖ ಶಿವಯೋಗಿಗಳ ಗುರುದೇವಾಶ್ರಮದಲ್ಲಿ ನಡೆದ ಗುರು ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಗುರುದೇವಾಶ್ರಮದ ಈಶ ಪ್ರಸಾದ ಶ್ರೀಗಳು ಮಾತನಾಡಿ ೧೨ ನೆಯ ಶತಮಾನದಲ್ಲಿ ಶರಣಾಂದೋಲನ ಆದ್ಯ ಉದ್ದೇಶವೇ ವ್ಯಕ್ತಿಗತ ಪರಿವರ್ತನೆ, ವ್ಯಕ್ತಿ ಪರಿವರ್ತನೆ ಗೊಂಡರೆ ಸಹಜವಾಗಿ ಸಮುದಾಯ ಪರಿವರ್ತನೆ ಯಾಗುತ್ತದೆ. ಅಂತಹ ವ್ಯಕ್ತಿಗತ ಪರಿವರ್ತನೆಗೆ ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ ಒಂದು ಉಜ್ವಲ ನಿದರ್ಶನ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತ ಸಮುದಾಯವೆಲ್ಲ ಸ್ವಾಭಾವಿಕವಾಗಿಯೇ ಸಿದ್ದೇಶ್ವರ ಶ್ರೀಗಳ ಪ್ರವಚನ ಅನುಸರಿಸಿದರು ಎಂದರು.
ತಿಕೋಟಾದ ಚೆನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ ಸಿದ್ದೇಶ್ವರ ಶ್ರೀಗಳ ಪ್ರವಚನದಲ್ಲಿ ಯಾವದೇ ಧರ್ಮ, ಪಂಥ ಅಥವಾ ಸಮುದಾಯ ಸಾಂಪ್ರದಾಯಿಕ ಆಚರಣೆ ಗಳಿಗೆ ಸಂಬಸದಿಸಿಲ್ಲ. ಅವರು ನೀಡಿದ ಪ್ರವಚನ ಮೂಲಕ ವಿಶ್ವಕ್ಕೆ ನೀಡಿದ ಅನನ್ಯ ಕೊಡುಗೆ ಸಂಬAದಿಸಿದ್ದು ಎಂದರು.
ಟಾಕಳಿಯ ಶಿವದೇವ ಶ್ರೀಗಳು ಮಾತನಾಡಿಸಿದ್ದೇಶ್ವರ ಶ್ರೀಗಳು ಪ್ರವಚನದ ಮೂಲಕ ಸಾಮಾಜಿಕ ಕಾರ್ಯಗಳ ತತ್ವದ ತಳಹದಿಯ ಮೇಲೆ ಹೊಸದೊಂದು ಸಮಾಜ ಕಟ್ಟಲು ಶ್ರಮಿಸಿದವರು. ಶರಣ ಸಮುದಾಯದಲ್ಲಿ ಎದ್ದು ಕಾಣುವ ಸಿದ್ದೇಶ್ವರ ಶ್ರೀಗಳು ತನ್ನ ಶ್ರಮದಿಂದ ಚಿಂತನೆಯಿAದ ಸಂಘಟನಾ ಶಕ್ತಿಯಿಂದ ಬದುಕಿರುವಾಗಲೇ ದಂತ ಕಥೆಯಾದರು ಎಂದರು.
ಶಿವಪ್ರಸಾದ ಶ್ರೀಗಳು ಹಿರೇಪಡಸಲಗಿ, ಚಿಂಚಲಿಯ ಸಿದ್ದ ಪ್ರಸಾದ ಶ್ರೀಗಳು ಮಾತನಾಡಿ ಸಿದ್ದೇಶ್ವರರು ಪ್ರವಚನ ಕುರಿತಂತೆ ಸಾಹಿತ್ಯಿಕ, ಸಾಂಸ್ಕೃತಿಕ ಸಾಮಾಜಿಕ, ಧಾರ್ಮಿಕ ಹೀಗೆ ಹತ್ತು ಹಲವಾರು ಆಯಾಮಗಳಲ್ಲಿ ಪ್ರವಚನಗಳಲ್ಲಿ ಚಿಂತನೆ ಮಾಡುತ್ತಿದ್ದರು ಎಂದರು.
ಷಡಷ್ಕರಿ ಶ್ರೀಗಳು ವಿಜಯಪುರ, ಯೋಗಾನಂದ ಶ್ರೀಗಳು ಚಡಚಣ, ಶಿವಲಿಂಗ ಶ್ರೀಗಳು ಚಡಚಣ ಮಾತನಾಡಿ ಅಥರ್ಗಾ ಗ್ರಾಮದಲ್ಲಿ ಸಿದ್ದೇಶ್ವರ ಶ್ರೀಗಳ ಕುರಿತು ೧೦೮ ದಿನಗಳ ವರೆಗೆ ನಡೆದ ಚಿಂತನೆ ಕುರಿತು ಪ್ರಶಂಸಿಸಿದರು. ಶಿಕ್ಷಕ ಸಿ.ಎಸ್.ಮೇತ್ರಿ ಸ್ವಾಗತಿಸಿ ನಿರೂಪಿಸಿದರು.
ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಶ್ರೀ ಷಣ್ಮುಖ ಶಿವಯೋಗಿಗಳ ಗುರುದೇವಾಶ್ರಮದಲ್ಲಿ ನಡೆದ ಗುರು ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಕಾಗವಾಡದ ಯತಿಶ್ವಾರಾನಂದ ಶ್ರೀಗಳು ಮಾತನಾಡಿದರು..