ಧಾರವಾಡ : ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಚಾಲಕರಾದ ಪರಶುರಾಮ್ ನಿಲ್ನಾಯಕರವರ ನೇತೃತ್ವದಲ್ಲಿ ಎಸ್ಸಿ ಎಸ್ಟಿ ನೌಕರರ ಮುಂಬಡ್ತಿ ವಿಷಯವಾಗಿ ತಾರತಮ್ಯ ಮತ್ತು ಜಾತಿ ನಿಂದನೆ ಮಾಡಿರುವ ಅರಣ್ಯ ವರಿಷ್ಠ ಅಧಿಕಾರಿಗಳ ವಿರುದ್ಧ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು ಜಾತಿ ನಿಂದನೆ ಮತ್ತು ತಾರತಮ್ಯದ ವಿಷಯದಲ್ಲಿ ವಿಳಂಬ ಮಾಡಿದ್ದು ರೋಸ್ಟರ್ ಪದತಿ ಪ್ರಕಾರ ಮುಂಬಡ್ತಿ ನೀಡದೆ ಇದ್ದಿದ್ದು ಲಂಚವನ್ನು ತೆಗೆದುಕೊಂಡು ಸಾಮಾನ್ಯ ಅಧಿಕಾರದಲ್ಲಿ ಎಸ್ ಸಿ ಎಸ್ ಟಿ ಅವರನ್ನು ಪರಿಗಣಿಸದೆ ಸಾಮಾನ್ಯ ಪದ್ಧತಿಯಲ್ಲಿ ಮುಂಬಡ್ತಿ ನೀಡಿದ್ದು ಖಂಡಿಸಿ ಇಂದು ದಲಿತ ಸಂಘರ್ಷ ಸಮಿತಿ ಭೀಮವಾದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಜಿಲ್ಲಾ ದಲಿತ ಸಂಘರ್ಷ ಸಮಿತಿ ಭೀಮ ವಾದ ಸಂಘಟನೆಯ ಜಿಲ್ಲಾ ಸಂಚಾಲಕರಾದ ಯಮುನಪ್ಪ ಗುಣಕಿ ಅವರು ಮಾತನಾಡಿ ಎಸ್ಸಿ ಎಸ್ಟಿ ನೌಕರರ ಮೇಲೆ ಆಗಿರುವಂತ ಅನ್ಯಾಯವನ್ನು ಖಂಡಿಸಿ ಮಾನ್ಯ ಅರಣ್ಯ ವರಿಷ್ಠ ಅಧಿಕಾರಿಗಳ ಗಮನಕ್ಕೆ ನೌಕರರಿಗೆ ಆಗಿರುವಂತ ಅನ್ಯಾಯವನ್ನು ತೋರಿಸುವ ಮೂಲಕ ಅದನ್ನು ಕೂಡಲೇ ಸರಿಪಡಿಸದಿದ್ದಲ್ಲಿ ನಾವು ಮುಂಬರುವ ಸ್ವತಂತ್ರ ದಿನೋತ್ಸವದಂದು ದಿನಾಂಕ ಆಗಸ್ಟ್ 15 ಉಗ್ರವಾದ ಹೋರಾಟದೊಂದಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ದಲಿತ ಸಂಘರ್ಷ ಸಮಿತಿ ಭೀಮವಾದ ಎಚ್ಚರಿಕೆ ನೀಡಿದೆ.
ಸಾವಿರಾರು ಕಾರ್ಯಕರ್ತರ ಜೊತೆಗೆ ದಲಿತ ಸಂಘರ್ಷ ಸಮಿತಿ ಧಾರವಾಡ ನಗರವನ್ನು ಸಂಪೂರ್ಣ ಬಂದು ಮಾಡಿಸುವ ನಿಟ್ಟಿನಲ್ಲಿ ಅನ್ಯಾಯವನ್ನು ಉಗ್ರವಾಗಿ ಖಂಡಿಸಲಾಗುತ್ತಿದೆ ಎಂದು ರಾಜ್ಯ ಸಂಚಾಲಕರಾದ ಪರಶುರಾಮ ನೀಲನಾಯಕ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ರವಿ ಬಸ್ತ್ವಾಡ್ಕರ್ ರಾಜು ಅಸೋಡಿ ಪ್ರಕಾಶ್ ಹೊಸಮನಿ ಗಿರ್ಮಲ್ ಕಾಂಬಳೆ ಸಂಗಮೇಶ್ ಕಾಂಬಳೆ ತುಳಜರಾಮ ನೀಲನಾಯಕ್ ಮಹಿಳಾ ಕಾರ್ಯಕರ್ತರು ಭಾಗಿಯಾಗಿದ್ದರು.