ಇಂಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡಕ್ಕೆ ಮನೆ ಕರಕಲು..
ಇಂಡಿ : ಆಕಸ್ಮಿಕ ಬೆಂಕಿ ಅವಘಡಕ್ಕೆ ಮನೆ ಸುಟ್ಟು ಭಸ್ಮವಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಿಕ್ಕಬೇನೂರ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಚಿಕ್ಕ ಬೇವನೂರ ಗ್ರಾಮದಲ್ಲಿ ಕಾಂತಪ್ಪ ಮೇಲಿನಮನೆ ಎಂಬುವರು ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲುಯಾಗಿದೆ. ಮನೆಯಲ್ಲಿದ್ದ ನಗದು , ಚಿನ್ನ ಸೇರಿದಂತೆ ಸುಮಾರು 5 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ಪೋಲಿಸರು ದೌಡಾಯಿಸಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಮನೆ ಹೊತ್ತಿ ಉರಿಯುವ ವಿಡಿಯೋ ಸ್ಥಳೀಯರ ಮುಬೈಲ್ ಲ್ಲಿ ಸೇರೆಯಾಗಿದೆ. ಇಂಡಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.