೨೧ ದಿನಗಳ ಕಾಲ ಅನುಷ್ಠಾನ ಪೂರ್ಣಗೊಳಿಸಿದ ಅಭಿನವ ಮುರುಘೇಂದ್ರ ಶಿವಾಚಾರ್ಯ
ಇಂಡಿ: ತಾಲೂಕಿನ ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಶ್ರಾವಣ ಮಾಸದಲ್ಲಿ ಕೇದಾರನಾಥ ಜ್ಯೋತಿರ್ಲಿಂಗದ ದೇವಸ್ಥಾನದಲ್ಲಿ ೨೧ ದಿನಗಳ ಕಾಲ ಅನುಷ್ಠಾನ ಮುಗಿಸಿ ಮರಳಿ ಸೋಮವಾರ ಶಿರಶ್ಯಾಡ ಗ್ರಾಮಕ್ಕೆ ಆಗಮಿಸಿದರು.
ಅನುಷ್ಠಾನ ಮುಗಿಸಿ ಆಗಮಿಸಿದ ಶ್ರೀಗಳಿಗೆ ಶಿರಶ್ಯಾಡ ಗ್ರಾಮದ ಹಿರಿಯರು ಸೇರಿದಂತೆ ಪಕ್ಕದ ಗ್ರಾಮಗಳಾದ ಸಂಗೋಗಿ, ಹಿರೇಮಸಳಿ, ತೆಗ್ಗಿಹಳ್ಳಿ, ಮಾರ್ಸನಳ್ಳಿ ಹೀಗೆ ಹಲವು ಗ್ರಾಮಗಳ ಭಕ್ತರು ಪಾಲ್ಗೊಂಡು ಅದ್ದೂರಿಯಾಗಿ ರಥದ ಮೇಲೆ ಕೂರಿಸಿ, ಮಹಿಳೆಯರು ಕುಂಭ ಮೇಳದೊಂದಿಗೆ ಮೆರವಣ ಗೆ ಮೂಲಕ ಶ್ರೀಮಠಕ್ಕೆ ಸ್ವಾಗತಿಸಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಉದಗೀರ್ ಡಾ. ಶಂಭುಲಿಂಗ ಶಿವಾಚಾರ್ಯರು, ಶಿವಾನಂದ ಮಹಾಸ್ವಾಮಿಗಳು ಸೇರಿದಂತೆ ನೂರಾರು ಭಕ್ತರು ಇದ್ದರು.
ಇಂಡಿ: ಅನುಷ್ಠಾನ ಮುಗಿಸಿ ವಾಪಸ್ ಗ್ರಾಮಕ್ಕೆ ಬಂದ ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರನ್ನು ರಥದಲ್ಲಿ ಕೂರಿಸಿ ಅದ್ದೂರಿ ಮೆರವಣ ಗೆರ ಮೂಲಕ ಸ್ವಾಗತಿಸಲಾಯಿತು.