ಅಫಜಲಪುರ: 2023 ರ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಮಧ್ಯ ವಿವಿಧ ಪಕ್ಷದ ಹುರಿಯಾಳುಗಳು ಟಿಕೆಟ್ಗಾಗಿ ತುಂಬಾ ಪೈಪೋಟಿ ನಡೆಸಿದ್ದಾರೆ. ಈ ಮಧ್ಯೆ ತಮ್ಮ ನೆಚ್ಚಿನ ನಾಯಕನಿಗೆ ಬಿಜೆಪಿ ಟಿಕೆಟ್ ಸಿಗಲೆಂದು ಅಭಿಮಾನಿಯೊಬ್ಬ ಪಾದಯಾತ್ರೆ ಹಾಗೂ ದಿಡ್ ನಮಸ್ಕಾರ ಹಾಕಿದ್ದಾರೆ.
ಹೌದು ಅಫಜಲಪುರ ಮತ ಕ್ಷೇತ್ರದ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿರುವ ನಿತೀನ್ ಗುತ್ತೇದಾರ್ ಅಭಿಮಾನಿಗಳಿಂದ ವಿವಿಧ ಹರಕೆಗಳು ತೀರಿಸಲಾಗುತ್ತಿದೆ. ಅಫಜಲಪುರ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಲೆಂದು ಸಂಕಲ್ಪಿಸಿ ಸರಡಗಿ ಬಿ ಗ್ರಾಮ ದಿಂದ ಖಾಜಾ ಬಂದೇ ನವಾಜ್ ದರ್ಗಾ ಕಲಬುರಗಿ ವರೆಗೆ ಅಭಿಮಾನಿಯೊಬ್ಬ ಪಾದಯಾತ್ರೆ ಹಮ್ಮಿಕೊಂಡಿದ್ದಾನೆ.
ಬಂದರವಾಡ ಗ್ರಾಮದ ಗುಂಡೂರಾವ್ ಬಸವರಾಜ್ ನಾಗಠಾಣಾ ಎನ್ನುವ ಅಭಿಮಾನಿಯಿಂದ ತಮ್ಮ ನಾಯಕನಿಗೆ ಟಿಕೆಟ್ ಸಿಗಲೆಂದು ಗ್ರಾಮದೇವತೆಗೆ ಸೇವೆ ಸಲ್ಲಿಸಿ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ BJP ಟಿಕೆಟ್ ಸಿಗಲಿ ಹಾಗೂ
ಅಫಜಲಪೂರ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಯಾಗಲೆಂದು ಹರಕೆ ತೀರಿಸುತ್ತಿದ್ದಾರೆ.