ಇಂಡಿ : ಬೈಕ್ಗೆ ಕಾರು ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಾದ ಕೆಡಿ ಗ್ರಾಮದ ಆರ್ಪಿ ಡಾಬಾದ ಬಳಿ ನಡೆದಿದೆ. ಲಿಂಗದಳ್ಳಿ ಗ್ರಾಮದ ಅಮಸಿದ್ದ ಹೂಗಾರ ಗಾಯಗೊಂಡಿದ್ದಾನೆ. ಅಲ್ಲದೇ, ಅಪಘಾತದ ಬಳಿಕ ಕಾರಿನ ನಂಬರ ಪ್ಲೇಟ್ KA 28 MA 1089 ಕೆಳಗೆ ಬಿದ್ದಿದೆ. ಆದ್ರೇ, ಕಾರು ಚಾಲಕ ಕಾರಿನ ಸಮೇತ ಪರಾರಿಯಾಗಿದ್ದಾನೆ. ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.