ಇಂಡಿ : ವಿಧಾನಸಭೆ ಚುನಾವಣೆ ಕಾವು ರಂಗೇರಿದೆ. ವಿವಿಧ ಪಕ್ಷದ ನಾಯಕರು ತಮ್ಮ ತಮ್ಮ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಅದರಂತೆ ಇಂಡಿ ವಿಧಾನ ಸಭಾ ಮತಕ್ಷೇತ್ರದಿಂದ ಜೈ ಮಹಾಭಾರತ ಪಕ್ಷದ ಪ್ರಭಲ ಅಭ್ಯರ್ಥಿಯಾಗಿ ಹಿರಿಯ ನ್ಯಾಯವಾದಿ ಎಸ್.ಜೆ ವಾಲಿಕಾರ ಅವರು ನಾಮಪತ್ರ ಸಲ್ಲಿಸಿದ್ದಾರೆ. ಪಟ್ಟಣದಲ್ಲಿರುವ ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ಚುನಾವಣೆ ಅಧಿಕಾರಿ ಹಾಗೂ ಕಂದಾಯ ಉಪವಿಭಾಗ ಅಧಿಕಾರಿಯಾಗಿರುವ ರಾಮಚಂದ್ರ ಗಡಾದೆ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ ಕೆ ಲಿಂಗದಳ್ಳಿ, ಪ್ರವೀಣ ಕೊರಹಳ್ಳಿ, ಸುನೀಲ್ ಕೋಳಿ, ಹಾಗೂ ಇನ್ನೋರ್ವ ನ್ಯಾಯವಾದಿ ಭಾಗಿಯಾಗಿದ್ದರು.