ಇಂಡಿ : ಶಾಸಕ ಯಶವಂತರಾಯಗೌಡ ಪಾಟೀಲ್ ಅವರನ್ನು 50 ಸಾವಿರ ಹೆಚ್ಚಿನ ಮತಗಳಿಂದ ಗೆಲ್ಲಿಸುತ್ತಿರಿ ಎಂದು ನಂಬಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ನಿಂಬೆ ಗಿಡಕ್ಕೆ ನೀರು ಉಣ್ಣಿಸುವ ಮೂಲಕ ಚಾಲನೆ ನೀಡಿದರು. ಶಾಸಕ ಯಶವಂತರಾಯಗೌಡ್ರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ. ಯಶವಂತರಾಯಗೌಡ ಪಾಟೀಲ್ ಒಬ್ಬ ಸಜ್ಜನ ರಾಜಕಾರಣಿ ಆಗಿದ್ದಾರೆ. ನಾನು ಸಿಎಂಯಾಗಿದ ವೇಳೆ ಈ ಕ್ಷೇತ್ರಕ್ಕೆ ಬಹಳ ಕೊಡುಗೆ ನೀಡಿದ್ದೇನೆ. ಗೌಡ್ರ ಕಂಡ್ರೆ ಪ್ರೀತಿ ಜಾಸ್ತಿ ನನಗೆ.
ಇದೆ ವೇಳೆ ಯಶವಂತರಾಯಗೌಡ ಪಾಟೀಲ್ ಅವರನ್ನು ಸಚಿವರನ್ನಾಗಿ ಮಾಡಿ ಎಂದು ಜನತೆ ಘೋಷಣೆ ಕೂಗಿದರು. ಅದಕ್ಕಾಗಿ ಏ ಮೊದಲು ಗೆಲ್ಲಸ್ರಯ್ಯಾ ಮುಂದಿನದ್ದು ಆಮೇಲೆ ನೋಡೋಣ ಎಂದು ಸಿದ್ದರಾಮಯ್ಯ ಹೇಳಿದರು. ಅಲ್ಲದೇ, ನಾನು ಇಂಡಿ ಕ್ಷೇತ್ರಕ್ಕೆ ಹಲವು ಸಲ ಬಂದಿದ್ದೇನೆ. ಭೀಮಾಶಂಕರ ಸಕ್ಕರೆ ಕಾರ್ಖಾನೆಗೆ ಹಣ ನೀಡಬೇಕು ಎಂದು ಯಶವಂತರಾಯಗೌಡ ಪಾಟೀಲ್ ನನ್ನ ಬಳಿ ಬಂದಿದ್ದರು. ಈ ಭಾಗದ ರೈತರಿಗಾಗಿ ಸಕ್ಕರೆ ಕಾರ್ಖಾನೆಗೆ ನಾನು 40 ಕೋಟಿ ಕೊಟ್ಟಿದ್ದೇನೆ. ಅದು ಇದೀಗ್ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದು ಸಂತಸ ತಂದಿದೆ.


















