ವಿಜಯಪುರ : ಐತಿಹಾಸಿಕ ಸಂಗಮನಾಥ ದೇವರ ಮೂರ್ತಿಯನ್ನು ಕಳ್ಳರು ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ನಡೆದಿದೆ. ಬೆಲೆಬಾಳುವ ಪಂಚಲೋಹದ ಸಂಗಮನಾಥ ಮೂರ್ತಿ, ಹಿತ್ತಾಳೆಯ ಬಸವಣ್ಣನ ಮೂರ್ತಿ, ಇತರೆ ಹಿತ್ತಾಳೆ, ತಾಮ್ರದ ಸಾಮಾನುಗಳನ್ನು ಕಳ್ಳತನ ಮಾಡಿದ್ದಾರೆ.
ದೇವಸ್ಥಾನದ ಬಾಗಿಲಿನ ಕೀಲಿ ಮುರಿದು ಕಳ್ಳರು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಎಂದಿನಂತೆ ಪೂಜೆ ಮಾಡಲೆಂದು ಅರ್ಚಕರು ದೇಗುಲಕ್ಕೆ ಬಂದಾಗ ಕಳ್ಳತನವಾಗಿರೋದು ಬಹಿರಂಗವಾಗಿದೆ. ಸುಮಾರು 3 ಲಕ್ಷ ಬೆಲೆಬಾಳುವ ಮೂರ್ತಿಗಳು ಕಳ್ಳತನವಾಗಿದೆ. ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.