ವಿಜಯಪುರ : ವಕೀಲ ಎಸ್ ಎಸ್ ಖಾದ್ರಿಯನ್ನು ವಿಜಯಪುರದಿಂದ ಚಾಮರಾಜನಗರಕ್ಕೆ ಗಡಿಪಾರುಗೈದು ವಿಜಯಪುರ ಎಸಿ ಬಲರಾಮ ಲಮಾಣಿ ಆದೇಶ ಮಾಡಿದ್ದಾರೆ.
ವಕೀಲ ಖಾದ್ರಿ ಮೇಲೆ ವಿವಿಧ ಠಾಣೆಯಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದು, ಅಲ್ಲದೇ, ಸಮಾಜದ ಸ್ವಾಸ್ಥ್ಯ, ಕೋಮಗಲಭೆ ಸೃಷ್ಟಿಸುವ ಸಂಭವ ಹಿನ್ನಲೆ ಗಡಿಪಾರು ಮಾಡಲಾಗಿದೆ. ಇನ್ನು ಖಾದ್ರಿ ಮೇಲೆ ಗೋಳಗುಮ್ಮಟ್ 5, ಜಲನಗರ ಒಂದು ಹಾಗೂ ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಒಂದು ಕೇಸ್ ದಾಖಲಾಗಿದೆ. ಅದಕ್ಕಾಗಿ ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಠಾಣೆಯಲ್ಲಿ ಹಾಜರಾತಿ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.