“ರೈತಾಪಿ ಜನರ ಮನೆ ಬಾಗಿಲೆಗಿಗೆ ನಿಮ್ಮ ದಾಖಲೆ “
“ಬಂತು ನೋಡಿ ಮನೆ ಬಾಗಿಲಿಗೆ ದಾಖಲೆ “
“ನಿಮ್ಮ ದಾಖಲೆ ನಿಮ್ಮ ಹಕ್ಕು “
“ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಕರ್ತವ್ಯ”
ಇಂಡಿ : ಕಂದಾಯ ಸಚಿವರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಆರ್ ಅಶೋಕ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಐತಿಹಾಸಿಕ ತೀರ್ಮಾನವೇ ರೈತಾಪಿ ಜನರ ಮನೆ ಬಾಗಿಲಿಗೆ ನಿಮ್ಮ ದಾಖಲೆ ಕಾರ್ಯಕ್ರಮ.
ಈ ಕಾರ್ಯಕ್ರಮನವನ್ನು ಇಂಡಿ ಪಟ್ಟಣದ ವಾರ್ಡ – ೪ರ ಸಾತಪುರ ನಗರದಲ್ಲಿ ಮನೆ ಮನೆಗೆ ಬೇಟಿ ನೀಡಿ ಕಂದಾಯ ಪ್ರಮಾಣ ಪತ್ರವನ್ನು ತಹಶಿಲ್ದಾರ ಗ್ರೇಡ್ ೨ ಆರ್ ಎಸ್ ರೆಡವಡಿಗರ್ ಮತ್ತು ಪುರಸಭೆ ಅಧ್ಯಕ್ಷೆ ಶ್ರೀಮತಿ ಬನ್ನೆಮ್ಮ ಯಲ್ಲಪ್ಪ ಹದರಿ ಕಂದಾಯ ಪ್ರಮಾಣ ಪತ್ರ ವಿತರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಂದಾಯ ನೀರಿಕ್ಷಕ ಬಸವರಾಜ್ ರಾವೂರ್ ಗ್ರಾಮ ಲೆಕ್ಕಾಧಿಕಾರಿ ಕವಿತಾ ಕರಜಗಿ ಹಾಜರಿದ್ದರು.