ಹೊಸ ಜ್ಞಾನ ಸಂಪಾದನೆಯ ಅವಕಾಶವೇ ದೀಪಾವಳಿ ಹಬ್ಬದ ಮೂಲ ಆಶಯ
Voice of Janata : ಹೊಸ ಜ್ಞಾನ ಸಂಪಾದನೆಯ ಅವಕಾಶವೇ ದೀಪಾವಳಿ ಹಬ್ಬದ ಮೂಲ ಆಶಯದೀಪˌ ಅಥವಾ ದೀವಟಿಗೆ ಎಂಬ ವಸ್ತು ಬತ್ತಿˌ ತೈಲ ಮತ್ತು ಇವುಗಳನ್ನು ಸಂರಕ್ಷಿಸಲು ಆಧಾರವಾಗಿರುವ ಬಟ್ಟಲನ್ನು ಒಳಗೊಂಡ ಸಂಯುಕ್ತ ರೂಪದ ಸಾಧನವಾಗಿದೆ. ಬತ್ತಿಯ ಮೂಲಕ ತೈಲವನ್ನು ಸ್ರವಿಸಿ ಬೆಳಕನ್ನು ನೀಡುವ ಪರಿಕರವಾಗಿದೆ. ತೈಲವು ಬತ್ತಿಯ ಮೂಲಕ ಶಾಖದೊಂದಿಗೆ ಘರ್ಷಣೆ ಹೊಂದಿ ಬೆಳಕನ್ನು ನೀಡಿ ಅಂಧಕಾರವನ್ನು ಓಡಿಸುತ್ತಾ ಪರಿಸರದಲ್ಲಿನ ಸಕಲ ಸೌಂದರ್ಯವನ್ನು. (ಒಳಿತು ಕೆಡುಕನ್ನು) ಅಲ್ಲಿನ ಅರಿವನ್ನು ಮನನ ಮಾಡುವ ವಸ್ತುವಾಗಿದೆ. ಉದಾಹರಣೆಗೆ ಕತ್ತಲ ಕೊಣೆಯ ಅಜ್ಞಾನವನ್ನು ಹೋಗಲಾಡಿಸಿ ಬೆಳಕಿನ ಮೂಲಕ ಸುಜ್ಞಾನ ನೀಡುವ ವಸ್ತುವಾಗಿದೆ. ಅಂಧಕಾರದಲ್ಲಿ ಮುಳುಗಿದ್ದ ಮನಸ್ಸಿಗೆ ಜ್ಞಾನ ಒದಗಿಸುವ ಜೋತಿಯಾಗಿದೆ. ಅರಿವಿಗೆ ಅಡ್ಡವಾಗಿದ್ದ ಕತ್ತಲೆಯನ್ನು ದೂರವಾಗಿಸಿ ಅಲ್ಲಿರುವ ಎಲ್ಲದರ ಅರಿವನ್ನು ಒದಗಿಸುವ ಜ್ಞಾನ ಸಂಜೀವಿನಿಯಾಗಿ. ಅಂದರೆ ದೀಪದಲ್ಲಿನ ತೈಲವು ತನ್ನನ್ನು ತಾನು ಸುಟ್ಟುಕೊಂಡು ಪ್ರಪಂಚಕ್ಕೆ ಬೆಳಕನ್ನು ನೀಡಿ ಅಲ್ಲಿನ ಜ್ಞಾನವನ್ನು ನೀಡುವ ಮೂಲಕ. ಹೊಸ ಅವಿಷ್ಕಾರಕ್ಕೆ ದಾರಿ ತೋರಿಸುವ ಜೀವದಾತುವಾಗಿದೆ. ಆ ಜ್ಞಾನ ಹೊಸ ಬೆಳಕಿನ ಸಂಶೋಧನೆಯ ಶಕ್ತಿ (ತೈಲ) ವಾಗಿ ಮತ್ತೊಂದು ಕತ್ತಲೆಯನ್ನು ಓಡಿಸಿ ಹೊಸದಾದ ಜ್ಞಾನಕ್ಕೆ ದಾರಿ ಮಾಡಿಕೊಡುವ ಜ್ಞಾನದ ಸೆಲೆಯಾಗಿದೆ. ಈ
ದೀಪದ ಬೆಳಕು ನಿರಂತರವಾದ ಜ್ಞಾನ ಸಂಪಾದನೆಯ ಅರಿವಿಗೆ ಸಾಧನವಾಗಿ ದೀಪದಿಂದ ದೀಪ ಹಚ್ಚುವಂತಾಗಿ ನಿರಂತರತೆಯ ಜ್ಞಾನದ ಸಂಕೇತವಾಗಿದೆ.
ಬೆಳಕು ಬೆಳಕನ್ನು ಕಾಣಲು ಸಹಾಯಕವಾದಂತೆ ಮನುಷ್ಯನ ಜ್ಞಾನ ಪರಿಸರದಲ್ಲಿನ ಹೊಸ ಜ್ಞಾನವನ್ನು ಕಂಡುಕೊಳ್ಳಲು ಸಹಾಯಕವಾಗಬೇಕು ಎಂಬ ಸದುದ್ದೇಶದಿಂದ ದೀಪಗಳನ್ನು ಹಚ್ಚಿ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ದೀಪಾವಳಿಯು ದೀಪಗಳ ಹಬ್ಬ. ಅಂದರೆ ಹಿಂದಿನ ದೀಪ ಬೆಳಕನಿತ್ತು ಮುಂದಿನ ಜ್ಞಾನವನ್ನು ಅರಿಯಲು ವೇದಿಕೆಯಾಗಿದೆ. ಹಳೆಯ ಅರಿವಿನಿಂ ಹೊಸ ಅರಿವಿಗೆ ಹಾದಿ ಮಾಡಿಕೊಡುವ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತಿದೆ. ಕತ್ತಲೆಯಿಂದ ಬೆಳಕಿನೆಡೆಗೆˌ ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗುವ ಹಬ್ಬವಾಗಿದೆ. ಇಲ್ಲಿಯವರೆಗಿನ ಜ್ಞಾನದ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಹೋಸದಾದ ಜ್ಞಾನಕ್ಕೆ ದಾರಿ ತೋರುವ ಹಬ್ಬವಾಗಿದೆ.
ವೈಜ್ಞಾನಿಕ ಮತ್ತು ವೈಚಾರಿಕ ದೃಷ್ಠಿಕೋನದಲ್ಲಿ ಹಬ್ಬದ ಆಚರಣೆ ಹೆಚ್ಚು ಮಹತ್ವ ಪಡೆದಿದೆ.ದೀಪಾವಳಿ ದೀಪದಿಂದ ದೀಪ ಬೆಳಗಿˌ ಅಂಧಕಾರವನ್ನು ದೂರ ಮಾಡುತ್ತಾ ಜಗತ್ತಿಗೆ ಹೊಸ ಬೆಳಕು ನೀಡುವುದರ ಜೊತೆಗೆˌ ವ್ಯಕ್ತಿ ತಾನೂ ಹೊಸ ಜ್ಞಾನವನ್ನು ಪಡೆದುಕೊಳ್ಳುವ ಹಬ್ಬವಾಗಿದೆ. ಬೆಳಕನ್ನು ಹರಡಿಸಿ ಕತ್ತಲನ್ನು ಓಡಿಸಿˌ ಆ ಕತ್ತಲಿನೊಳಗೆ ಅಡಗಿದ ಹೊಸದಾದ ಜ್ಞಾನವನ್ನು ಪಡೆಯುವ ಅವಕಾಶವಾಗಿದೆ. ಈ ದೀಪಾವಳಿಯ ಹಬ್ಬವನ್ನು ಆನಂದದಿಂದˌ ಅಭಿಮಾನದಿಂದˌ ಆಸಕ್ತಿಯಿಂದ ಆಚರಿಸಿ ಅಜ್ಞಾನವನ್ನು ದೂರ ಮಾಡಿಕೊಂಡು ಜ್ಞಾನವನ್ನು ಪಡೆಯುವಂತಾಗೋಣ.
Writer By
















