ಮಕ್ಕಳ ಸಾಹಿತ್ಯ ಸಂಗಮ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ
ಇಂಡಿ : ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀಮತಿ ಶಾಲಿನಿ ಮಾಣಿಕಚಂದ ದೋಶಿ ಮಹಿಳಾ ಪದವಿ ಪೂರ್ವ ಕಾಲೇಜು ಹಾಗೂ ಮಕ್ಕಳ ಸಾಹಿತ್ಯ ಸಂಗಮ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಕಿತ್ತೂರಾಣಿ ಚೆನ್ನಮ್ಮ, ಒನಕೆ ಓಬವ್ವ ಸಂಗೊಳ್ಳಿ ರಾಯಣ್ಣ, ಭುವನೇಶ್ವರಿಯ ಪಾತ್ರಗಳನ್ನು ಅಭಿನಯಿಸಿದರು, ಕರ್ನಾಟಕ ನಾಡು ನೆಲ ಜಲ ಕುರಿತು ವಿದ್ಯಾರ್ಥಿನಿಯರು ಹಾಡುಗಳನ್ನು ಭಾಷಣವನ್ನು ಮಾಡಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಎಮ್ ಎಸ್ ಎಸ್ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಇಂಡಿ ತಾಲೂಕ ಕನ್ನಡ ಸಾಹಿತ್ಯದ ಗೌರವಾಧ್ಯಕ್ಷರು ಹಾಗೂ ಉಪನ್ಯಾಸಕರಾದ ಸತ್ಯಣ್ಣ ಹಡಪದ್ ಮಾತನಾಡಿ ಕನ್ನಡ ಸಾಹಿತ್ಯ ಬೆಳೆದು ಬಂದ ಪರಿಯನ್ನು ಕನ್ನಡ ಸಾಹಿತ್ಯದ ಭಾಷೆಯ ಜೊತೆಗೆ ಸಾಮಾಜಿಕ ಸಮಸ್ಯೆ ಹಾಗೂ ಪರಿಹಾರಗಳ ಕುರಿತು ಶ್ರೇಷ್ಠ ಸಾಹಿತಿ ಕುವೆಂಪು ಸಾಹಿತ್ಯದಲ್ಲಿ ಕನ್ನಡದ ನಾಡು ನುಡಿಯ ಕುರಿತು ಮಾತನಾಡಿದರು. ಸಾಹಿತಿಗಳು ಸಮಾಜಮುಖಿಯಾಗಿ ಸಾಹಿತ್ಯವನ್ನು ರಚಿಸಬೇಕೆಂದು ಕರೆ ನೀಡಿದರು.
ಇಂಡಿ ತಾಲೂಕ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾದ ಸದಾನಂದ ಎಸ್ ಈರನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ ಸಾಹಿತ್ಯವು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಕನ್ನಡ ಸಾಹಿತ್ಯದ ಅಭಿಮಾನವನ್ನು ಹೆಚ್ಚಿಸುವಲ್ಲಿ ಮಕ್ಕಳ ಸಾಹಿತ್ಯ ಕೆಲಸ ಮಾಡುತ್ತದೆ. ನಮ್ಮ ನಾಡು ಸಾಧು ಸಂತರ ನೆಲೆಬೀಡು ನಾವೆಲ್ಲರೂ ಕರ್ನಾಟಕದ ರಾಜ್ಯದ ಅಭಿಮಾನವನ್ನು ಕನ್ನಡ ಅಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರು ಆದ ವಿಜಯಕುಮಾರ್ ರಾಥೋಡ್ ಮಾತನಾಡುತ್ತಾ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಪ್ರಶಂಸನೀಯ ಮಕ್ಕಳು ಇಂಥ ಕಾರ್ಯಕ್ರಮದಲ್ಲಿ ಜ್ಞಾನವನ್ನು ಪಡೆದು ಭವಿಷ್ಯತ್ತಿನಲ್ಲಿ ಸಾಹಿತಿಗಳಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರುಗಳಾದ ಎ ಬಿ ಪಾಟೀಲ್, ಆರ್ ಎಸ್ ಬಿರಾದಾರ ಆರ್ ಜಿ ಪೂಜಾರಿ ಶ್ರೀಮತಿ ಫರಹ ರಬ್ಬಾನಿ ಆರ್ ವಿ ಅಂಗಡಿ ಎಸ್ ಎಸ್ ಆಳೂರ ರಾಮಚಂದ್ರ ಉಪಸ್ಥಿತ ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸಾರಿಕಾ .ರಾಜೇಶ್ವರಿ ಮಾಡಿದರು. ಸ್ವಾಗತವನ್ನು ಮಕ್ಕಳ ಸಾಹಿತ್ಯದ ಪ್ರಧಾನ ಕಾರ್ಯದರ್ಶಿ .ಎಂ ಸಿಂದೆ ಮಾಡಿದರು. ಕುಮಾರಿ ಸವಿತಾ ಗಡಗಲಿ ಪ್ರಾರ್ಥನಾ ಗೀತೆ ಹಾಡಿದಳು , ವಿದ್ಯಾರ್ಥಿನಿಯರು ಹಾಜರಿದ್ದರು.
















