ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..!
ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಪ್ರಾಂತಾಧಿಕಾರಿಗಳಿಗೆ (ಉಪ ವಿಭಾಗ ಅಧಿಕಾರಿಗಳಿಗೆ )ಮನವಿ ಸಲ್ಲಿಸಲಾಗಿದೆ.
ಕಾಲುವೆಗೆ ನೀರು ಬಾರದೆ ರೈತರು ಹಾಗೂ ಜಾನುವಾರುಗಳು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ರೂಗಿ, ತೆನ್ನಿಹಳ್ಳಿ,ತಡವಲಗಾ,ಹಂಜಗಿ,ಇಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ನೀರಿಗಾಗಿ ಕಾಯುತ್ತಿದ್ದಾರೆ.
ನವೆಂಬರ್ 6ರ ಸಂಜೆ 6 ಗಂಟೆಯೊಳಗೆ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದಿದ್ದರೆ ರಸ್ತೆ ತಡೆದು ಉಗ್ರ ಹೋರಾಟ ನಡೆಸುವುದಾಗಿ ರೈತ ಸಂಘ ಎಚ್ಚರಿಕೆ ನೀಡಿದೆ.
ಈ ಕುರಿತು ನವೆಂಬರ್ 4ರಂದು ಪ್ರಾಂತಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಗುರಪ್ಪ ಅಗಸಗರ, ಕೆಂಚಪ್ಪ ನಿಂಬಾಳ, ಲಾಯಪ್ಪ ಪೂಜಾರಿ, ಲಾಯಪ್ಪ ಉಪ್ಪಾರ, ಉಪ್ಪಾರ, ಮುತ್ತಣ್ಣ ಲಾಳಸಂಗಿ, ಜಟ್ಟಪ್ಪ ಮಾವಿನಹಳ್ಳಿ, ರಮೇಶ್ ದಳವಯಿ ಸೇರಿದಂತೆ ಅನೇಕರು ಇದ್ದರು.
















