‘ಆ ಸಭೆ ನನ್ನ ಪ್ರಾಣಕ್ಕೆ ಆಪತ್ತು ತಂದಿತ್ತು’ ತಮ್ಮ ನಿರ್ಧಾರವನ್ನು ಕೂಡಲೇ ಪ್ರಕಟಿಸುವಂತೆ ಒತ್ತಡ ಹೇರಿದ್ದಾರೆ : ವೃಷಭಲಿಂಗ ಸ್ವಾಮೀಜಿ ಗಂಭೀರ ಆರೋಪ
ಇಂಡಿ: ಮರಗೂರದ ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ನಡೆದ ಬಂಥನಾಳ ಪೀಠದ ವಿವಾದದ ಸಂಧಾನ ಸಭೆಯಲ್ಲಿ ವೃಷಭಲಿಂಗೇಶ್ವರ ಸ್ವಾಮೀಜಿಗಳಿಗೆ ಪೊಲೀಸ್ ಇಲಾಖೆಯ ಡಿವೈಎಸ್ಪಿ ಸದಾಶಿವ ಕಟ್ಟೀಮನಿ ಅನುಚಿತವಾಗಿ ವರ್ತಿಸಿದ್ದಾರೆ ಹಾಗೂ ತಮ್ಮ ನಿರ್ಧಾರವನ್ನು ಕೂಡಲೇ ಪ್ರಕಟಿಸುವಂತೆ ಒತ್ತಡ ಹೇರಿದ್ದಾರೆ. ಅವರ ವಿರುಧ್ಧ ಸಂಭAಧಿಸಿದ ಮೇಲಾಧಿಕಾರಿಗಳು ಕೂಡಲೆ ಕ್ರಮ ಜರುಗಿಸಬೇಕು ಎಂದು ನಾಲ್ಕುನೂರಕ್ಕೂ ಅಧಿಕ ಭಕ್ತರು ಗುರುವಾರ ಡಿವೈಎಸ್‌ಪಿ ಕಚೇರಿ ಎದುರು ಪ್ರತಿಭಟಿಸಿದರು.
ಭಾನುವಾರ ನಡೆದ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ, ಡಿವೈಎಸ್ಪಿ ಸದಾಶಿವ ಕಟ್ಟೀಮನಿ, ಸಿಪಿಐ ಸುನಿಲ್ ಪಾಟೀಲ ಸೇರಿದಂತೆ ಮಠಾಧೀಶರು ಭಾಗವಹಿಸಿದ್ದರು. ಸಭೆಯಲ್ಲಿ ತಮ್ಮ ಮೇಲೆ ಒತ್ತಡ ಹೇರಲಾಗಿದ್ದು, ಈ ವೇಳೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕೂಡ ಕಣ್ಣಿಗೆ ಕಣ್ಣಿಟ್ಟು ಸುಮ್ಮನೆ ಕುಳಿತುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ವೃಷಭಲಿಂಗ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
‘ಆ ಸಭೆ ನನ್ನ ಪ್ರಾಣಕ್ಕೆ ಆಪತ್ತು ತಂದಿತ್ತು’
ಗುರುವಾರ ಬಂಧನಾಳ ಪೀಠದಲ್ಲಿ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಘಟನೆ ಕುರಿತು ಮಾತನಾಡಿದ ವೃಷಭಲಿಂಗ ಸ್ವಾಮೀಜಿ ಕಣ್ಣೀರಿಟ್ಟರು. ‘ಮರಗೂರಿನ ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಆ ಸಭೆ ನನ್ನ ಪ್ರಾಣಕ್ಕೆ ಆಪತ್ತು ತಂದಿತ್ತು. ನನ್ನ ಮೇಲೆ ಒತ್ತಡ ಹೇರಲಾಯಿತು’ ನಾನು ಬದುಕಿ ಬಂದಿರುವುದೇ ಒಂದು ಪವಾಡ ಎಂದು ವೃಷಭಲಿಂಗ ಸ್ವಾಮೀಜಿ ಭಕ್ತರ ಮುಂದೆ ಅಳಲು ತೋಡಿಕೊಂಡರು.
ಸ್ವಾಮೀಜಿಗಳ ಆರೋಪದಿಂದ ಆಕ್ರೋಶಗೊಂಡ ಭಕ್ತರು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಭಕ್ತರನ್ನು ತಡೆಯಲು ಪ್ರಯತ್ನಿಸಿದರು.
ದಿಂಗಾಲೇಶ್ವರ ಶ್ರೀ ಮಧ್ಯಸ್ಥಿಕೆ
ಈ ವೇಳೆ ದಿಂಗಾಲೇಶ್ವರ ಶ್ರೀಗಳು ಮಧ್ಯಸ್ಥಿಕೆ ವಹಿಸಿ ಭಕ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಡಿವೈಎಸ್ಪಿ ಸದಾಶಿವ ಕಟ್ಟಿಮನಿ ಅವರು, ‘ನಾನು ಕೂಡ ಲಚ್ಯಾಣ ಮಠದ ಭಕ್ತ’ ಎಂದು ತಿಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾದರು. ಭಕ್ತರು ಸಹನೆ ಕಾಯ್ದುಕೊಂಡು ಧಾರ್ಮಿಕ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ನಡೆಸುವಂತೆ ಶ್ರೀಗಳು ಮನವಿ ಮಾಡಿದರು.
ಮುತ್ತಿಗೆ ಯತ್ನ ವಿಫಲಗೊಳಿಸಲು ಪೊಲೀಸರ ಹರಸಾಹಸ
ಭಕ್ತರು ಡಿವೈಎಸ್ಪಿ ಕಚೇರಿಯತ್ತ ತೆರಳಲು ಮುಂದಾದ ಸಂದರ್ಭದಲ್ಲಿ ಸಿಪಿಐ ಸುನಿಲ್ ಪಾಟೀಲ ನೇತೃತ್ವದಲ್ಲಿ ಪೊಲೀಸರು ಮುತ್ತಿಗೆ ಯತ್ನವನ್ನು ತಡೆಯಲು ಪ್ರಯತ್ನಿಸಿದರು. ಮಾತಿನ ಚಕಮಕಿ ಉಂಟಾಗದAತೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು.
ಘಟನೆಗೆ ಸಂಬAಧಿಸಿದAತೆ ವೃಷಭಲಿಂಗ ಸ್ವಾಮೀಜಿ ಮಾಡಿರುವ ಆರೋಪಗಳು ಹಾಗೂ ಸಭೆಯಲ್ಲಿ ನಡೆದ ಬೆಳವಣಿಗೆಗಳ ಕುರಿತು ಭಕ್ತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣವನ್ನು ಶಾಂತಿಯುತವಾಗಿ ಬಗೆಹರಿಸಿ, ಧಾರ್ಮಿಕ ಕಾರ್ಯಕ್ರಮಗಳು ಯಾವುದೇ ಅಡ್ಡಿಯಿಲ್ಲದೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಭಕ್ತ ವಲಯದಲ್ಲಿ ಕೇಳಿಬಂದಿದೆ.
ಬಂಥನಾಳ ಪೀಠದ ಪೀಠಾಧಿಪತಿಗಳು ಲಚ್ಯಾಣ ಕಾರ್ಯಕ್ರಮಕ್ಕೆ ತೆರಳಲು ಸೂಕ್ತ ಬಂದೋಬಸ್ತ ಒದಗಿಸುತ್ತೇವೆ. ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶಾಂತಿ ಕಾಪಾಡಬೇಕು. ಗದ್ದಲಕ್ಕೆ ಆಸ್ಪದ ನೀಡಬಾರದು.
ಸದಾಶಿವ ಕಟ್ಟೀಮನಿ, ಡಿವೈಎಸ್‌ಪಿ ಇಂಡಿ ಉಪವಿಭಾಗ.
ನನಗೆ ಪೊಲೀಸ್ ಇಲಾಖೆಯವರು ಕರೆ ಮಾಡಿ ಶಾಸಕರು ಭೀಮಾಶಂಕರ ಸಕ್ಕರೆ ಕಾರ್ಖಾನೆಗೆ ಬರಲು ತಿಳಿಸಿದ್ದು, ನೀವು ಈಗಲೆ ಬರಬೇಕು ಎಂದು ತಿಳಿಸಿದಾಗ ನಾನು ಭಾನುವಾರ ಕಾರ್ಖಾನೆಗೆ ಹೋದೆ. ಅಲ್ಲಿ ಪೊಲೀಸ್ ಇಲಾಖೆಯ ಮೂಲಕ ನನ್ನ ಮೇಲೆ ಒತ್ತಡ ಹೇರುವ ಕಾರ್ಯ ನಡೆದಿದೆ. ಶಾಸಕ ಯಶವಂತ್ರಾಯಗೌಡರು ಸಹ ನನ್ನನ್ನು ಸುಮ್ಮನೆ ಕೂರುವಂತೆ ಏರುಧ್ವನಿಯಲ್ಲಿ ಹೇಳಿ ನನ್ನ ಶರೀರದ ಮೇಲೆ ಭಾರ ಹಾಕಿ ಕೂರಿಸಿದರು. ಈಗಲೆ ನಿಮ್ಮ ನಿರ್ಧಾರ ಪ್ರಕಟಿಸಿ ಎಂದು ಒತ್ತಾಯ ಮಾಡಿದರು. ಅವರೆಲ್ಲ ಹೇಳಿದಂತೆ ಹೂಂಕಾರ ಹಾಕಿ ಬಂದೆ. ನಾನು ಬದುಕಿ ಬಂದಿದ್ದೇ ನನ್ನ ಪುಣ್ಯ.
ವೃಷಭಲಿಂಗ ಸ್ವಾಮೀಜಿ, ಬಂಥನಾಳ ಮಠ.
ಪ್ರತಿಭಟನೆಯಲ್ಲಿ ಸಂಗು ಮಕಾದಾಮ್, ಶಿವಾನಂದ ವಾಡಿ, ಎ.ಪಿ. ಕಾಗವಾಡಕರ, ಈರಣ್ಣ ಮುಜಗೊಂಡ, ಅಶೋಕಗೌಡ ಪಾಟೀಲ, ಎಸ್.ಎಂ,. ಬಿರಾದಾರ, ಕಲ್ಲನಗೌಡ ಬಿರಾದಾರ, ದೊಡಗೊಂಡಪ್ಪ ಬಿರಾದಾರ, ಕಿರಣ ಮುಜಗೊಂಡ, ಪವನ್ ಕಾಗವಾಡಕರ, ಬಿ.ಎಂ. ಕರಾಳೆ ಸೇರಿದಂತೆ ನಾನೂರಕ್ಕೂ ಹೆಚ್ಚು ಜನ ಉಪಸ್ಥಿತರಿದ್ದರು.
ಇಂಡಿ: ಡಿವೈಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವ ಬಂಥನಾಳ-ಲಚ್ಯಾಣ ಮಠದ ಭಕ್ತರನ್ನುದ್ದೇಶಿಸಿ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು.

ಇಂಡಿ: ದಿಂಗಾಲೇಶ್ವರ ಸ್ವಾಮೀಜಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಲಚ್ಯಾಣ ಪೀಠಕ್ಕೆ ಅ.೨ ಶುಕ್ರವಾರ ವೃಷಭಲಿಂಗ ಸ್ವಾಮೀಜಿ ಭೇಟಿ ನೀಡಲಿದ್ದು ಕಾರ್ಯಕ್ರಮ್ಕೆ ಬಂದೋಬಸ್ತ ಒದಗಿಸಿ, ಶಾಂತಿ ಕಾಪಾಡುವಂತೆ ಮನವಿ ಮಾಡಿದರು.




















