ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಸನ್ಮಾನ್..
ಅಥಣಿ : ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಅವರಿಗೆ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯಿಂದ ಸನ್ಮಾನ ಮಾಡಲಾಯಿತು. ಅಥಣಿ ನಗರದ ಸ್ಥಳೀಯ ವಿಶೇಷ ರಾಮೇಶ್ವರ ದೇವಸ್ಥಾನಕ್ಕೆ ಭೇಟಿಮಾಡಿ ಅಲ್ಲಿ ಅಡಗಿರುವ ವಿಶೇಷತೆ ಬಗ್ಗೆ ಅರಿತು ಅಶೋಕ ತಳವಾರ ಅವರನ್ನು ಗುರುತಿಸಲಾಯಿತು.
ಅಶೋಕ ತಳವಾರ ಅವರು ಅಭಿಮಾನದಿಂದ ಸ್ಥಾಪನೆ ಮಾಡಿರುವ ಭಾರತ ರತ್ನ, ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ದಿವಂಗತ ಇಂದಿರಾಗಾಂಧಿ ಭವ್ಯ ಮೂರ್ತಿಯನ್ನು ವೀಕ್ಷಣೆ ಮಾಡಿದ ಸಂಸ್ಥೆಯ ಪದಾಧಿಕಾರಿಗಳು, ಆ ಸುಂದರ ಮೂರ್ತಿಯನ್ನು ಸ್ವಂತ ಆಸಕ್ತಿಯಿಂದ ಸ್ಥಾಪನೆ ಮಾಡಿರುವ ಹೆಮ್ಮೆಯ ಅಭಿಮಾನಿ ಅಶೋಕ ತಳವಾರ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಮೂರ್ತಿಗೆ ಪೋಲಿಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಪ್ರವೀಣ ನಾಯಿಕ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು.
ಅಶೋಕ ತಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಹೆಮ್ಮೆಯ ಅಭಿಮಾನಿ ಅಶೋಕ್ ತಳವಾರ ಅವರು, “ನಾನು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಅಪ್ಪಟ ಅಭಿಮಾನಿಯಾಗಿದ್ದೇನೆ. ದೇಶಕ್ಕಾಗಿ ಅವರು ನೀಡಿದ ಕೊಡುಗೆ ಮತ್ತು ಅವರ ಧೀಮಂತ ನಾಯಕತ್ವ ನಮಗೆಲ್ಲರಿಗೂ ಸದಾ ಪ್ರೇರಣೆಯಾಗಿದೆ. ಅವರ ನೆನಪನ್ನು ಅಮರವಾಗಿಸಲು ಈ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಈ ಇಂದಿರಾಗಾಂಧಿಯ ಮೂರ್ತಿಯನ್ನು ವೀಕ್ಷಿಸಲು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಮಂತ್ರಿಗಳು ಇಲ್ಲಿಗೆ ಭೇಟಿ ನೀಡಿ ಹೋಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಇಲ್ಲಿಗೆ ಬರುವಂತೆ ವಿನಂತಿಸಿದ್ದೆ, ಅವರು ಬರುವುದಾಗಿ ಹೇಳಿದ್ದಾರೆ ಕೊನೆಗೂ ಭೇಟಿ ನೀಡಲು ಸಾಧ್ಯವಾಗಲಿಲ್ಲ. ರಾಹುಲ ಗಾಂಧಿ ಅವರ ಜನ್ಮದಿನದಂದು ಅವರನ್ನು ಭೇಟಿ ಮಾಡಿ ಈ ಮೂರ್ತಿಯ ಬಗ್ಗೆ ಮಾಹಿತಿ ನೀಡಿ ಬಂದಿದ್ದೇನೆ, ಅವರು ಕೂಡ ಬರುವುದಾಗಿ ಭರವಸೆ ನೀಡಿದ್ದಾರೆ” ಎಂದು ತಮ್ಮ ಪ್ರಯತ್ನಗಳನ್ನು ಹಂಚಿಕೊಂಡರು.
ಅಥಣಿ ತಾಲೂಕಿಗೆ ಹೆಮ್ಮೆಯ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಅಥಣಿ ತಾಲೂಕು ಘಟಕದ ಮುಖ್ಯಸ್ಥರಾದ ಪ್ರವೀಣ ನಾಯಿಕ ಮಾತನಾಡಿ, “ಕಾಶಿಯಲ್ಲಿರುವ ರಾಮೇಶ್ವರ ಇಲ್ಲಿಯೂ ಇದೆ ಎನ್ನುವುದು ನಮಗೆ ಹೆಮ್ಮೆಪಡುವ ವಿಚಾರ. ದೇಶದ ಹೆಮ್ಮೆಯ ಮಾಜಿ ಮಹಿಳಾ ಪ್ರಧಾನಿಯವರ ಮೂರ್ತಿಯನ್ನು ಸ್ಥಾಪನೆ ಮಾಡಿರುವುದು ಇಡೀ ಅಥಣಿ ತಾಲೂಕಿಗೆ ಹೆಮ್ಮೆ ತರುವ ಸಂಗತಿಯಾಗಿದೆ. ಹಿಂದೆ ಹಲವು ರಾಜಕಾರಣಿಗಳು ಇಲ್ಲಿಗೆ ಬಂದು ಹೋಗಿದ್ದಾರೆ. ಆದರೆ ಪ್ರಸ್ತುತ ದಿನಗಳಲ್ಲಿ ಹಾಲಿ ರಾಜಕಾರಣಿಗಳು ಯಾರೂ ಇಲ್ಲಿಗೆ ಭೇಟಿ ನೀಡಿಲ್ಲದಿರುವುದು ಬೇಸರದ ಸಂಗತಿ. ಮೂರ್ತಿ ಸ್ಥಾಪಿಸಿ ಇಂದಿರಾಗಾಂಧಿ ಅವರ ನೆನಪನ್ನು ಜೀವಂತವಾಗಿಟ್ಟಿರುವ ಅಶೋಕ ತಳವಾರ ಅವರ ಬೆನ್ನೆಲುಬಾಗಿ ನಮ್ಮ ಸಂಸ್ಥೆ ಸದಾಕಾಲ ನಿಲ್ಲುತ್ತದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಮುಖ ಮುಖಂಡರಾದ ಶರಣಪ್ಪ ಸಿಂಧೆ, ಅನಿಲ ಭಾಮನೆ,ಎಂ.ಶರ್ಮಾ, ಕಿರಣ ಪಾಟೋಳೆ, ಅಶೋಕ ಬಡಿಗೇರ,ಶಿವಾನಂದ ನಾವಿ, ಪ್ರಶಾಂತ ಶಿಂದೆ, ಮಾದೇವ ನಾಯಿಕ, ಅಮೂಲ ಚವಾಣ ಮಹಿಳಾ ಘಟಕದ ಮುಖ್ಯಸ್ಥರಾದ ಕವಿತಾ ಬೋಸ್ಲೆ, ಸರಸ್ವತಿ ನ್ಯಾಮಗೌಡ, ಶಾಂತ ಸಿಂಧಿ, ರೇಷ್ಮಾ ತೇಲಿ, ಸಾವಿತ್ರಿ ಬಡಿಗೇರ ಸೇರಿದಂತೆ ಇನ್ನೂ ಅನೇಕ ಮುಖಂಡರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಮಹೇಶ್ ಶರ್ಮಾ, ಅಥಣಿ ಬೆಳಗಾವಿ ಜಿಲ್ಲೆ


















