ಉಚಿತ ಸಾಮೂಹಿಕ ವಿವಾಹ: ಭವ್ಯ ಧಾರ್ಮಿಕ ಕಾರ್ಯಕ್ರಮ.ಏಪ್ರಿಲ್ 22 ಕ್ಕೆ
ಅಫಜಲಪೂರ : ಪಟ್ಟಣದಲ್ಲಿ ಹಜರತ ದಾವಲಮಲೀಕರ ವರಪುತ್ರ ಹಜರತ ಮಲ್ಲಿಕಾರ್ಜುನ ದಾವಲಮಲೀಕ ಮುತ್ಯಾರವರ ದಿವ್ಯ ಸಂಕಲ್ಪದಂತೆ ಏಪ್ರಿಲ್ 22ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭವ್ಯವಾಗಿ ಜರುಗಲಿವೆ ಎಂದು ಆಶ್ರಮದ ಪೀಠಾಧಿಪತಿ ಶ್ರೀ ಹಜರತ ಮಲ್ಲಿಕಾರ್ಜುನ ದಾವಲಮಲೀಕ ಮುತ್ಯಾ ತಿಳಿಸಿದ್ದಾರೆ.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಏಪ್ರಿಲ್ 22ರಂದು ಜಾಗೀರದಾರ ಫಂಕ್ಷನ್ ಹಾಲ್‌ನಲ್ಲಿ ಮದ್ಯಾಹ್ನ 12:40 ಕ್ಕೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಶಿ ಪೀಠದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಕರ ದಿವ್ಯ ಸಾನಿಧ್ಯವಿದ್ದು, ಸಮಸ್ತ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ ಎಂದರು.
ಸಾಮೂಹಿಕ ವಿವಾಹದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಉಚಿತ ಅರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶ್ರೀ ಷ. ಬ್ರ. ಶ್ರೀಕಂಠ ಶಿವಾಚಾರ್ಯರು, ಬಮ್ಮಲಿಂಗೇಶ್ವರ ಬೃಹನ್ಮಠ, ರೇವೂರ (ಬಿ) ವಹಿಸಲಿದ್ದು,
ಮುಖ್ಯ ಅತಿಥಿಗಳಾಗಿ ಶಾಸಕ ಎಂ.ವೈ. ಪಾಟೀಲ್, ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ ಸೇರಿದಂತೆ ಅನೇಕ ರಾಜಕೀಯ ಗಣ್ಯರು, ಸರ್ಕಾರಿ ಅಧಿಕಾರಿಗಳು, ನ್ಯಾಯವಾದಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಆದ್ದರಿಂದ ತಾಲೂಕು ಹಾಗೂ ಜಿಲ್ಲೆಯ ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಕೀಲರಾದ ಎಂ ಎಲ್ ಪಟೇಲ್ ಬಳೂಂಡಗಿ, ವಾಸಿಮ್ ಅಬ್ದುಲ್ ಜಾಗೀರದಾರ ವಕೀಲರು,ಬಾಬುಮಿಯಾ ಪುಲಾರಿ,
ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


















