ಇಂಡಿ | ಹೋಳಿ ಹಾಗೂ ರಮಜಾನ ಹಬ್ಬದ ಪ್ರಯುಕ್ತ ಶಾಂತಿ ಸಭೆ
ಇಂಡಿ: ಹೋಳಿ ಹಬ್ಬವನ್ನು ಎಲ್ಲ ಜಾತಿ, ಧರ್ಮದವರು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸಿಪಿಐ ಸುನೀಲ ಪಾಟೀಲ ಹೇಳಿದರು.
ಇಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಹೋಳಿ ಹಾಗೂ ರಮಜಾನ ಹಬ್ಬದ ಪ್ರಯುಕ್ತ ಆಯೋಜಿಸಿ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವಕ-ಯುವತಿಯರು ಮೊಟ್ಟೆ, ವಾರ್ನಿಷ, ಗ್ರೀಸ್ ಬಳಸಿ ಬಣ್ಣ ಹಚ್ಚಬಾರದು. ಗುಲಾಲು ಪುಡಿಯನ್ನು ಬಳಸಿದ ಬಣ್ಣವನ್ನೇ ಹಚ್ಚಬೇಕು. ಒತ್ತಾಯದಿಂದ ಯಾರಿಗೂ ಬಣ್ಣ ಹಚ್ಚಬಾರದು. ಈ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ.
ಇನ್ನೂ ಇಂಡಿ ಗ್ರಾಮೀಣ ಪೋಲಿಸ್ ಠಾಣಾ ಪಿಎಸ್ ಐ ರಾಜು ಮಮದಾಪೂರ ಮಾತನಾಡಿ, ಹೋಳಿ ಸ್ನೇಹದ ಬಾಂಧವ್ಯ ತೋರುವ ಹಬ್ಬ. ಅದು ವಿಜಯದ ಸಂಕೇತ. ಸಾರ್ವಜನಿಕರು ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕು. ಇದೇ ಸಮಯದಲ್ಲಿ ರಂಜಾನ್ ಕೂಡ ಇದ್ದು, ಎಲ್ಲ ಹಬ್ಬವನ್ನೂ ಶಾಂತಿಯುತವಾಗಿ ಆಚರಿಸಬೇಕು. ಗಲಾಟೆ, ಅಹಿತಕರ ಘಟನೆ ಕಂಡು ಬಂದಲ್ಲಿ ಅಂತವರ ಮೇಲೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಇನ್ನೂ ಕ್ರೈಂ ಪಿಸ್ಐ ಶಿವಾಜಿ , ವಿನಾಯಕ ಗುಣಸಾಗರ, ಬಿ ಎಸ್ ತಳವಾರ, ಸುರೇಶ ನಡಗಡ್ಡಿ, ಆಸಿಫ್ ಕಾರಬಾರಿ, ಅಬ್ಬಾಸ್ ಜಮಖಂಡಿ, ರವಿ ರಾಯಜಿ, ನಿಂಗಪ್ಪ ತಿಳಗೂಳ, ಪುಂಡಲೀಕ ಕಪಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇನ್ನೂ ಪೋಲಿಸ್ ಸಂಜೀವ ತಳವಾರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.


















