INDI | ಪಿಎಂ ಕಿಸಾನ್ ಯೋಜನೆಯ ಸಹಾಯಧನ ಪಡೆಯಲು ಇ-ಕೆವೈಸಿ (EKYC ) :ಉಪ ಕೃಷಿ ನಿರ್ದೇಶಕ ಚಂದ್ರಕಾಂತ
ಇಂಡಿ : “ಪಿಎಂ ಕಿಸಾನ್ ಯೋಜನೆಯ ಸಹಾಯಧನ ಪಡೆಯಲು ತಾಲೂಕು ವ್ಯಾಪ್ತಿಯ ರೈತರು ಪೂಟ್ ತಂತ್ರಾಂಶದಲ್ಲಿ ನೊಂದಾಯಿಸುವುದು ಹಾಗೂ ಪೂಟ್ ನೋಂದಾಣಿ ಸಂಖ್ಯೆಗಳಿಗೆ (ಎಫ್‌ಐಡಿ) ರೈತರ ಎಲ್ಲ ಭೂ ಹಿಡುವಳಿಗಳನ್ನು ಫೆ.25ರೊಳಗೆ ಜೋಡಣೆ ಮಾಡುವುದು ಅವಶ್ಯಕವಾಗಿರುತ್ತದೆ. ಎಂದು ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರಕಾರದ ಮಾನದಂಡಗಳ ಪ್ರಕಾರ ಭೂ ಹಿಡುವಳಿ ಹೊಂದಿರುವ ಜಿಲ್ಲೆಯ ರೈತರು ಪೂಟ್ ಹಾಗೂ ಭೂಮಿ ದತ್ತಾಂಶಗಳನ್ನು ನಿಯಮಿತವಾಗಿ ಸಮೀಕರುಸುವುದು ಅತಿ ಮುಖ್ಯವಾಗಿರುತ್ತದೆ. ಇದರೊಂದಿಗೆ ಪೂಟ ತಂತ್ರಾಂಶದಲ್ಲಿ ರೈತರ ಪೂಟ್ ಐಡಿ ಮತ್ತು ಸಹಮತಿ ಪತ್ರವನ್ನು ವಿದ್ಯುನ್ಮಾನ ರೀತಿಯಲ್ಲಿ ತೆಗೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಈ ರೀತಿಯಾಗಿ ಸೃಜಿಸಲಾದ ಕೇಂದ್ರ ನೊಂದಾಯಿತ ರೈತ ಸಂಖ್ಯೆಯನ್ನು ಕೇಂದ್ರ ಸರಕಾರದಿಂದ ಅನುಷ್ಠಾನಗೊಳಿಸುವ ಪಿ.ಎಂ.ಕಿಸಾನ್ ಸೇರಿ ಎಲ್ಲ ಯೋಜನೆಗಳಲ್ಲಿ ಬಳಸಲು ಸಾಧ್ಯವಾಗುತ್ತದೆ. ಆದ್ದರಿಂದ ಫೆ.25ರೊಳಗೆ ರೈತರು ತಮ್ಮ ಆಧಾರ ಕಾರ್ಡ ಮತ್ತು ನೊಂದಾಯಿತ ಮೋಬೈಲ್ ನಂಬರ್ ಒಟಿಪಿ, ಜಮೀನಿನ ಪಹಣಿಗೆ ರೈತ ಸಂಪರ್ಕ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ, ಪಶು, ಮೀನುಗಾರಿಕೆ, ರೇಷ್ಮೆ ಇಲಾಖೆ ಕಚೇರಿಗಳಲ್ಲಿ ಇ-ಕೆವೈಸಿ ಮಾಡಿಸಬೇಕು”. ಎಂದು ಮಾಹಿತಿ ನೀಡಿದರು.
ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.



















