ವಿಜಯಪುರದಲ್ಲಿ ವಿಮಾನ ದುರಂತ..! ಆಗಿದ್ದೇನು..?
ವಿಜಯಪುರ : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಜೆಟ್ ವಿಮಾನ ಧರೆಗೆ ಉರುಳಿದಿದೆ.
ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಜೆಟ್ ವಿಮಾನ ಏಕಾಏಕಿ ದರೆಗೆ ಉರುಳಿಬಿದ್ದಿದೆ.
ವಿಮಾನದಲ್ಲಿ ತೈಲ (ಎಣ್ಣೆ ) ಖಾಲಿಯಾದ ಕಾರಣ ಜಮೀನಲ್ಲಿ ಜೆಟ್ ವಿಮಾನ ಬಿದ್ದಿದೆ. ಸೆಸ್ನಾ 172 ಟ್ಯಾಂಗೋ ಚಾರ್ಲಿ ಎಂಬ ಪ್ರೈವೆಟ್ ಜೆಟ್ ವಿಮಾನ ಇದಾಗಿದೆ. ಅಲ್ಲದೇ, ರೆಡ್ ಬರ್ಡ ಎಂಬ ಪ್ರಾವೈಟ್ ಜೆಟ್ ವಿಮಾನ ಇದಾಗಿದೆ. ಆದ್ರೇ, ಯಾವುದೆ ಪ್ರಾಣಾಪಾಯವಾಗಿಲ್ಲ. ಖಾಸಗಿ ಜೆಟ್ ನಲ್ಲಿದ್ದ ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಕಿತ್ಸೆಗಾಗಿ ಗಾಯಾಳುಗಳು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.



















