2026 – RCB ಮುಡಿಗೆ WPL ಕೀರಿಟ
Voice of janata.in : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಎರಡನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ದಾಖಲೆಯನ್ನು ಸರಿಗಟ್ಟಿದೆ. ಅಲ್ಲದೆ ಸತತ ಮೂರನೇ ವರ್ಷ ಟ್ರೋಫಿ ಎತ್ತಿದ ಫ್ರಾಂಚೈಸಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದೆ.
ಆರ್‌ಸಿಬಿ ಕಪ್ ಗೆಲುವಿನ ಅಭಿಯಾನವನ್ನು 2024ರಲ್ಲಿ ಆರಂಭಿಸಿತು. ಆಗಲೂ ಆರ್‌ಸಿಬಿ ಮಹಿಳಾ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ 17 ವರ್ಷಗಳ ಪ್ರಶಸ್ತಿ ಗೆಲುವಿನ ಬರಕ್ಕೆ ಬ್ರೇಕ್ ಹಾಕಿತ್ತು. ಅದಾದ ಬಳಿಕ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಇತಿಹಾಸ ನಿರ್ಮಿಸಿತ್ತು. ಈಗ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಅಮೋಘ ಪ್ರದರ್ಶನವನ್ನು ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಸತತ ಮೂರು ವರ್ಷವೂ ಪ್ರಶಸ್ತಿ ಗೆದ್ದ ಫ್ರಾಂಚೈಸಿ ಎಂಬ ಹಿರಿಮೆ ಆರ್‌ಸಿಬಿ ತಂಡದ್ದಾಗಿದೆ.



















