ಕರವೇಯಿಂದ ತಾಂಡಾ ಮನೆ ಮೇಲಿನ ವಿದ್ಯುತ್ ತಂತಿ ತೆರವು
ಇಂಡಿ : ನಗರದ ಅಡಿಯಲ್ಲಿ ಬರುವ ಕೆಸರಾಳ ತಾಂಡಾದಲ್ಲಿ ಕಳೆದ ೩೦ ವರ್ಷ ಹಿಂದೆ ಹೆಸ್ಕಾಂ ದವರು ಮನೆಯ ಮೇಲಿಂದ ತಂತಿ ಹಾಯಿಸಿ ಕಂಬಗಳಿಗೆ ಕನೆಕ್ಸನ ಕೊಟ್ಟಿದ್ದರು. ‘
ತಾಂಡಾದ ಕೆಸರಾಳ ತಾಂಡಾ ಘಟಕದ ಮತ್ತು ಯುವ ಕರವೇ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ವಿಜಯ ರಾಠೋಡ, ಗಣೇಶ ಚವ್ಹಾಣ, ಅಭಿಷೇಕ ರಾಠೋಡ ಮತ್ತು ತಾಂಡಾ ನಿವಾಸಿಗಳು ವಿದ್ಯುತ್ ಇಲಾಖೆಗೆ ಸತತ ಸಂಪರ್ಕ ಮತ್ತು ಮನೆಯ ಮೇಲಿನ ವಿದ್ಯುತ್ ತಂತಿಯಿAದ ಆಗುವ ಅನಾಹುತ ಕುರಿತು ಮನವರಿಕೆ ಮಾಡಿ ಕೊಟ್ಟಿದ್ದರು.
ಹೀಗಾಗಿ ಹೇಸ್ಕಾಂ ದವರು ವಿದ್ಯುತ್ ತಂತಿಗಳು ಮನೆಯ ಮೇಲಿರುವದನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿದರು.
ಕೆಸರಾಳ ತಾಂಡಾಗಳ ಮನೆಯ ಮೇಲಿನ ವಿದ್ಯುತ್ ತಂತಿ ಸ್ಥಳಾಂತರಿಸಿರುವದು


















