ಇಂಡಿ | ಕಳ್ಳ ಸಾಗಾಣಿಕೆ ೨೫ ಸಾವಿರ ರೂ ಅಕ್ಕಿ ಜಪ್ತಿ
ಇಂಡಿ : ಇಂಡಿ ಯಿಂದ ಚಿಕ್ಕಬೇವನೂರಕ್ಕೆ ಹೋಗುವ ರಸ್ತೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹತ್ತಿರ ಟಾಟಾ ಎಸಿ ವಾಹನದಲ್ಲಿ ಸಾಗಿಸುತ್ತಿದ್ದ ಅಕ್ಕಿಯನ್ನು ಸಂಶಯದ ಮೇಲೆ ರೇಡ್ ಮಾಡಲಾಗಿ ಟಾಟಾ ಎಸಿ ಯಲ್ಲಿದ್ದ ಚಾಲಕ ಸಮೇತ ಇಬ್ಬರೂ ಪರಾರಿಯಾಗಿರುತ್ತಾರೆ.
ಅಂದಾಜು ೯೧೦ ಕೆಜಿ ಅಕ್ಕಿ ರೂ ೨೫ ಸಾವಿರ ರೂ ಆಗಿರುತ್ತದೆ.
ಆಹಾರ ನೀರೀಕ್ಷಕ ಸಿದ್ರಾಮಪ್ಪ ಹುಣಸಗಿ, ಪಟ್ಟಣ ಸಿಪಿಐ ಪ್ರದೀಪ ಬಿಸೆ ಮತ್ತು ಜಿ.ಎಸ್.ನಿಲೂರೆ, ಆರ್.ಎಂ.ಬಿರಾದಾರ, ಎಸ್.ಆರ್.ಹುಣಸಗಿ ಇವರು ದಾಳಿ ಮಾಡಿ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಅಕ್ಕಿ ಬಡವರಿಗೆ ಹಂಚುವದ್ದಾಗಿತ್ತು ಎಂದು ತಿಳಿದುಬಂದಿದೆ.
ಕಳ್ಳ ಸಾಗಾಣಿಕೆ ಅಕ್ಕಿಯನ್ನು ಆಹಾರ ನೀರೀಕ್ಷಕ ಸಿದ್ರಾಮಪ್ಪ ಹುಣಸಗಿ, ಪಟ್ಟಣ ಸಿಪಿಐ ಪ್ರದೀಪ ಬಿಸೆ ವಶಪಡಿಸಿಕೊಂಡರು


















