ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 77 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಣೆ
ಮುದ್ದೇಬಿಹಾಳ: ತಾಲ್ಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ 77 ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಮಹಾತ್ಮಗಾಂಧಿ, ಡಾ ಬಿ ಅರ್ ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಭಾವು ಚಿತ್ರಕ್ಕೆ ಪುಷ್ಪ ಸಲ್ಲಿಸಿ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರ ಕಾರ್ಯಕರ್ತೆರಾದ ಇಂದಿರಾ ಕುಂಬಾರ,ಶಾಂತಾ ಈಳಗೇರ, ಸಾವಿತ್ರಿ ನಾಲತವಾಡ, ಬಸಮ್ಮ ಸೋಮನಾಳ, ಆಶಾ ಕಾರ್ಯಕರ್ತೆರಾದ ನೀಲಮ್ಮ ಪಾಟೀಲ,ಶಿವಲೀಲಾ ಪತ್ತಾರ,ಸುಮಂಗಲಾ ಹಿರೇಮಠ, ಅಂಗನವಾಡಿ ಕೇಂದ್ರ ಸಹಾಯಕಿರಾದ ಗೌರಮ್ಮ ನಾಲತವಾಡ, ಶಾಂಭವಿ,ಪಾಟೀಲ, ಕವಿತಾ ಸೋಮನಾಳ, ಸೇರಿದಂತೆ ಅಂಗನವಾಡಿ ಕೇಂದ್ರ ಮಕ್ಕಳು ಭಾಗವಹಿಸಿದ್ದರು.