ಜೆಡಿಎಸ್ ಪಕ್ಷದ ಕಾನೂನು ಘಟಕದ ತಾಲೂಕು ಅಧ್ಯಕ್ಷರಾಗಿ ನ್ಯಾಯವಾದಿ ಎಸ್.ಜೆ ವಾಲಿಕಾರ ಆಯ್ಕೆ
ಇಂಡಿ: ನ್ಯಾಯವಾದಿ ಎಸ್.ಜೆ ವಾಲಿಕಾರ ಅವರನ್ನು ಜೆಡಿಎಸ್ ಪಕ್ಷದ ಕಾನೂನು ಘಟಕದ ಇಂಡಿ ತಾಲೂಕಾ ಅಧ್ಯಕ್ಷರಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಸಂದರ್ಭದಲ್ಲಿ ಜೆಡಿಎಸ್ ಘಟಕದ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ, ತಮ್ಮ ಹಿರಿತನ ಅನುಭವ ಹಾಗೂ ಸಂಘಟನಾತ್ಮಕ ಚಾತುರ್ಯದಿಂದ ಪಕ್ಷವನ್ನು ಕಟ್ಟಿ, ಬಡವರ ದೀನರ, ಮಹಿಳೆಯರ ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಲು ನ್ಯಾಯವಾದಿಗಳಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಸಿದ್ದು ಡಂಗಾ, ಬಿ.ಎಲ್. ರಾಠೋಡ, ಮಂಜು ಬಡಿಗೇರ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ನ್ಯಾಯವಾದಿ ಎಸ್.ಜೆ ವಾಲಿಕಾರ ಅವರನ್ನು ಜೆಡಿಎಸ್ ಪಕ್ಷದ ಕಾನೂನು ಘಟಕದ ಇಂಡಿ ತಾಲೂಕಾ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಆದೇಶ ಪ್ರತಿಯನ್ನು ಜೆಡಿಎಸ್ ತಲೂಕಾಧ್ಯಕ್ಷ ಬಿ.ಡಿ. ಪಾಟೀಲ ಹಸ್ತಾಂತರಿಸಿದರು.



















