ನಿರ್ದೇಶಕರಾಗಿ ಆನಂದಗೌಡ ಎನ್ ಬಿರಾದಾರ ಆಯ್ಕೆ..!
ವಿಜಯಪುರ : ಸರಕಾರಿ ನೌಕರರ ಸಹಕಾರಿ ಬ್ಯಾಂಕ ನಿ, ವಿಜಯಪುರ ಇದರ ಮಾಜಿ ಅಧ್ಯಕ್ಷರು ಮತ್ತು ಹಾಲಿ ನಿರ್ದೇಶಕರಾಗಿರುವ ಶ್ರೀ ಆನಂದಗೌಡ ಎನ್ ಚಿರಾದಾರ ಅವರು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ.,ಬೆಂಗಳೂರು ಇದರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅರ್ಜುನ ೫ ಲಮಾಣಿ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪಾ ಎಸ್ ಗಚ್ಚಿನಮಠ ಇವರು ಶ್ರೀ ಆನಂದಗೌಡ ಎನ್ ಬಿರಾದಾರ ಇವರಿಗೆ ಸನ್ಮಾನಿಸಿ ಅಭಿನಂದಿಸಿದರು. ಸನ್ಮಾನ ಸಮಾರಂಭದಲ್ಲಿ ನಿರ್ದೇಶಕರಾದ ಅರವಿಂದ ಭೋ ಹೂಗಾರ ಹಣಮಂತ ಬಿ ಕೊಣದಿ, ಪ್ರಶಾಂತ ಎಸ್ ಚನಗೊಂಡ, ಅಲ್ಲಾಭಕ್ಷ ಎಮ್ ವಾಊಕಾರ, ಅಶೋಕ ವಿ. ಚನಬಸಗೋಳ, ಮಲಕಪ್ಪ ಎಸ್ ಟಕ್ಕಳಕಿ, ಚಂದ್ರಶೇಖರ ಟಿ ಜಿತ್ತಿ, ಎಸ್ ಎಸ್ ಕೆರೂರ, ಹನುಮಂತರಾಯ(ಕಿರಣ) ಸಿಂದಗಿ, ಮಹೇಶ ನಾಯಿಕ, ಸರಫರಾಜ ಎಸ್ ಕಂದಗಲ್, ಗೀತಾ ಎಸ್ ಹತ್ತಿ(ಕಳಸಗೊಂಡ), ಎಮ್ ಕೆ ಜೋಶಿ ಪ್ರಧಾನ ವ್ಯವಸ್ಥಾಪಕರು, ವ್ಯವಸ್ಥಾಪಕರಾದ ಸಿ ಎಸ್ ಹಿರೇಮಠ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು ಮತ್ತು ಬ್ಯಾಂಕಿನ ಸದಸ್ಯರು ಶುಭ ಹಾರೈಸಿದರು.


















