ಸಂಗಮೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಸಿದ್ರಾಮಪ್ಪಗೌಡ ಬಿರಾದಾರ ಅವಿರೋಧ ಆಯ್ಕೆ.
ಮುದ್ದೇಬಿಹಾಳ: ಪಟ್ಟಣದ ಪ್ರತಿಷ್ಠಿತ ಸಂಗಮೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಬಿದರಕುಂದಿ ಗ್ರಾಮದ ಸಿದ್ರಾಮಪ್ಪಗೌಡ ಸಂಗಪ್ಪ ಬಿರಾದಾರ ಅವರು ಮುಂದಿನ ಐದು ವರ್ಷದ ಅವಧಿಗೆ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಿದ್ರಾಮಪ್ಪಗೌಡ ಬಿರಾದಾರ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಆರ್.ಬಿ. ಪಾಟೀಲ್, ಹಿರಿಯರಾದ ಎಚ್.ಟಿ. ಬಿರಾದಾರ, ಬಿ.ಬಿ. ಕಾಳಗಿ, ಎಸ್.ಎಸ್. ಹೊಸಮನಿ, ಸಿ.ಎಲ್. ಬಿರಾದಾರ, ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರು, ಸಂಘದ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.
ನೂತನ ನಿರ್ದೇಶಕರಾಗಿ ಆಯ್ಕೆಯಾದ ಸಿದ್ರಾಮಪ್ಪಗೌಡ ಬಿರಾದಾರ ಅವರಿಗೆ ಬ್ಯಾಂಕಿನ ಅಭಿವೃದ್ಧಿ, ಪಾರದರ್ಶಕ ಆಡಳಿತ ಹಾಗೂ ಗ್ರಾಹಕ ಸ್ನೇಹಿ ಸೇವೆಗಳಿಗೆ ಆದ್ಯತೆ ನೀಡುವಂತೆ ಹಿರಿಯರು ಶುಭಾಶಯ ಕೋರಿದರು.


















