ಇಂಡಿ: ಅಗ್ನಿ ಅವಘಡಗಳು ಹೆಚ್ಚುತ್ತಿದ್ದು ಇಂಡಿ ಅಗ್ನಿಶಾಮಕ ಠಾಣೆಯಲ್ಲಿ ಒಂದೇ ಬೆಂಕಿ ನಂದಿಸುವ ವಾಹನ ಇದ್ದು ಇದರಿಂದಾಗಿ ಗ್ರಾಮೀಣ ಭಾಗದ ಜನರು ಹೆಚ್ಚಿನ ವಾಹನಕ್ಕೆ ಬೇಡಿಕೆ ಇಟ್ಟಿದ್ದು ಈಗ ಇಲಾಖೆಯಿಂದ
ನಗರದ ಅಗ್ನಿಶಾಮಕ ಠಾಣೆಗೆ ಮತ್ತೊಂದು ಹೊಸ ಅಗ್ನಿಶಾಮಕ ವಾಹನ ನೀಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು.
ಅವರು ಇಂಡಿ ನಗರದ ಅಗ್ನಿಶಾಮಕ ಠಾಣಾ ಆವರಣದಲ್ಲಿ ಮಂಗಳವಾರ ನೂತನ ಅಗ್ನಿಶಾಮಕ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ತಾಲೂಕಿನಾದ್ಯಂತ ಬೆಂಕಿ ಅವಘಡಗಳು ಹೆಚ್ಚಾಗಿ ನಡೆಯುತ್ತಿದ್ದು ಇನ್ನೂ ಹೆಚ್ಚಿನ ವಾಹನದ ಅವಶ್ಯಕತೆ ಇದೆ. ಇಂಡಿ ನಗರಕ್ಕೆ ಇನ್ನೊಂದು ವಾಹನದ ಬೇಡಿಕೆ ಇಡಲಾಗುತ್ತದೆ ಎಂದರು. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಕರೆ ಮಾಡಿರುತ್ತಾರೆ, ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಶ್ರೀಘ್ರವಾಗಿ ಕರೆಗೆ ಸ್ಪಂದಿಸಿ ಸ್ಥಳಕ್ಕೆ ಭಾವಿಸಬೇಕೆಂದು ಅಲ್ಲಿದ್ದ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಸುಭಾಶ ಹಿಟ್ಟನಳ್ಳಿ, ದೇವದಾನಮ್ ಎ. ಐ, ಸಹಾಯಕ್ ಅಗ್ನಿಶಾಮಕ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳಾದ ಶಿವಾನಂದ ಪೂಜಾರಿ,ಮಲ್ಲಿಕಾರ್ಜುನ ಗೋಟ್ಯಾಳ,ಸಂತೋಷ ಪೂಜಾರಿ, ಚಂದ್ರಕಾಂತ ಪವಾರ, ಮೋಹನ ನಾಯ್ಕ,ಪವನ ಲಂಗೋಟೆ,ಮಹ್ಮದಲಿ ಬಂತನಾಳ ಸೇರಿದಂತೆ ಇನ್ನಿತರರು ಇದ್ದರು.