• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ

    ಚರಂಡಿ ಸ್ವಚ್ಛಗೊಳಿಸಿ, ಅನಧಿಕೃತ ಕಟ್ಟಡ ತೆರವುಗೊಳಿಸಿ: ಪುರಸಭೆಗೆ ಇಂದಿರಾನಗರ ನಿವಾಸಿಗಳ ಆಗ್ರಹ

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    3 ನೇ ವರ್ಷದ ಹೆಜ್ಜೆ ಮೇಳಕ್ಕೆ ಚಾಲನೆ ನೀಡಿದ ಬಸವರಾಜ ಅಪ್ಪಾಜಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ; ಪವರ್ ಇಲ್ದೆ ಜನರು ಕಂಗಾಲು..!

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು: ಡಾ.ಬಾಬು ರಾಜೇಂದ್ರ ನಾಯಕ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      ಭ್ರಷ್ಟಾಚಾರ ಮಾಡುವುದೇ ಕಾಂಗ್ರೆಸಿನ ದೊಡ್ಡ ಸಾಧನೆ‌: ಸಂಸದ ರಮೇಶ್

      Voiceofjanata.in

      June 27, 2025
      0
      ಭ್ರಷ್ಟಾಚಾರ ಮಾಡುವುದೇ ಕಾಂಗ್ರೆಸಿನ ದೊಡ್ಡ ಸಾಧನೆ‌: ಸಂಸದ ರಮೇಶ್
      0
      SHARES
      26
      VIEWS
      Share on FacebookShare on TwitterShare on whatsappShare on telegramShare on Mail

      ಭ್ರಷ್ಟಾಚಾರ ಮಾಡುವುದೇ ಕಾಂಗ್ರೆಸಿನ ದೊಡ್ಡ ಸಾಧನೆ‌: ಸಂಸದ ರಮೇಶ್

      ಇಂಡಿ: ಕುಟುಂಬ ರಾಜಕಾರಣ ಇರುವ ಕಾರಣ ಕಾಂಗ್ರೆಸ್ ಪಕ್ಷದಿಂದ ದೇಶದ ಅಭಿವೃದ್ಧಿಯಾಗಿಲ್ಲ. ಬದಲಿಗೆ ತಮ್ಮ ಕುಟುಂಬದ ಅಭಿವೃದ್ಧಿ ಮಾಡುವುದರಲ್ಲಿಯೇ ಕಾಂಗ್ರೆಸ್ ನಾಯಕರು ಕಾಲ ಕಳೆದಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.

      ಮಂಗಳವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರಕಾರ ೧೧ ವರ್ಷ ಪೂರೈಸಿದ ಪ್ರಯುಕ್ತ ಇಂಡಿ ಮಂಡಲದಿAದ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

      ಮೋದಿ ಒಬ್ಬರು ದೈವೀ ಪುರುಷ ಅವರನ್ನು ಯಾರೂ ಏನು ಮಾಡಲು ಆಗುವುದಿಲ್ಲ. ಸಮೃದ್ಧ ದೇಶ ಕಟ್ಟುವಲ್ಲಿ ಮೋದಿ ಪಾತ್ರ ಅನನ್ಯವಾಗಿದೆ. ದೇಶಕ್ಕೆ ಮೋದಿ ಕೊಡುಗೆ ಏನು ಎಂದು ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೂನ್ಯ ಎಂಬ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಶೂನ್ಯ ಆಡಳಿತ ನೀಡುತ್ತಿದ್ದು, ಆ ಶೂನ್ಯ ಎಂಬ ಪದ ಅವರ ಬಾಯಲ್ಲಿ ಬಾಯಪಾಠ ಆಗಿಬಿಟ್ಟಿದೆ ಎಂದ ಅವರು, ರಾಜ್ಯದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದರು.

      ಪಕ್ಷದ ಬಹುತೇಕ ಶಾಸಕರಿಗೆ ಅನುದಾನ ನೀಡುತ್ತಿಲ್ಲವಾದ್ದರಿಂದ ತಮ್ಮ ಶಾಸಕರೇ ಪಕ್ಷದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡುವುದೇ ಕಾಂಗ್ರೆಸಿನ ದೊಡ್ಡ ಸಾಧನೆಯಾಗಿದೆ ಎಂದು ಆರೋಪಿಸಿದ ಅವರು, ಇಂಡಿ ಹಾಗೂ ಸಿಂದಗಿ ಭಾಗಕ್ಕೆ ನೀರಾವರಿ ಯೋಜನೆಯ ಸಲುವಾಗಿ ನಾನು ದೇವೇಗೌಡರು ಪ್ರಧಾನ ಮಂತ್ರಿ ಇದ್ದಾಗ ಅವರ ಕೈಕಾಲು ಹಿಡಿದು ೬೦ ಕೋಟಿ ರೂಪಾಯಿ ಅನುದಾನ ತಂದಿದ್ದೆ. ಈಗ ಆ ಕಾಲುವೆಗಳು ದುಸ್ಥಿತಿಗೆ ತಲುಪಿದ್ದು ಅವುಗಳನ್ನು ರಿಪೇರಿ ಮಾಡಲು ಸಹ ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ, ಹೀಗಿದ್ದರೆ ನಮ್ಮ ರೈತರಿಗೆ ತೊಂದರೆಯಾಗುತ್ತದೆ ಎಂಬುದನ್ನು ಅರಿತ ನಾನು ಮೋದಿ ಸಾಹೇಬರಿಗೆ ನಮ್ಮ ಕ್ಷೇತ್ರದ ಇಂಡಿ-ಸಿAದಗಿ ಕಾಲುವೆ ಪುನರ್ ನಿರ್ಮಾಣಕ್ಕಾಗಿ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿದ ಸನ್ಮಾನ್ಯ ಮೋದಿಜಿ ಅವರು ೨೬೬೬ ಕೋಟಿ ರೂಪಾಯಿ ಅನುದಾನವನ್ನು ನೀಡಿದ್ದಾರೆ ಎಂದರು.

      ಕೆಲ ಶಾಸಕರು ಇತ್ತೀಚೆಗೆ ಪತ್ರ ಬರೆದಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗುತ್ತಿದ್ದು, ನಾನು ೨೦೨೪ರಲ್ಲಿ ನರೇಂದ್ರ ಮೋದಿಯವರಿಗೆ ಅನುದಾನ ನೀಡುವಂತೆ ಪತ್ರ ಬರೆದಿದ್ದೇನೆ. ತದನಂತರ ಸಿಡಬ್ಲ್ಯೂಸಿ ಮೀಟಿಂಗಿಗೆ ನನ್ನನ್ನು ಆಹ್ವಾನಿಸಿದ್ದು ನಾನು ಖುದ್ದಾಗಿ ಹೋಗಿ ಆ ಮೀಟಿಂಗ್ನಲ್ಲಿ ನಮ್ಮ ಫೈಲ್ ಅನ್ನು ಪಾಸ್ ಮಾಡಿಸಿದ್ದೇನೆ, ಯಾವ ಸ್ಥಳದಲ್ಲಿ ನಿಂತು ಹೇಳು ಎಂದರೂ ನಾನು ಧೈರ್ಯವಾಗಿ ಹೇಳುತ್ತೇನೆ. ಈ ಕಾಲುವೆಗೆ ಅನುದಾನ ನೀಡಿದ್ದು ಪ್ರಧಾನಿ ನರೇಂದ್ರ ಮೋದಿಯವರು ಎಂದರು.
      ಕಾAಗ್ರೆಸ್ ಆಡಳಿತ ಅವಧಿಯಲ್ಲಿ ೨೦೧೧ರಲ್ಲಿ ನಮ್ಮ ದೇಶದ ಬಡತನದ ರೇಖೆ ಪ್ರತಿಶತ ೨೭.೫ ರಷ್ಟು ಇತ್ತು ಆದರೆ ಈಗ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದಲ್ಲಿ ನಮ್ಮ ದೇಶದ ಬಡತನ ರೇಖೆಯ ಪ್ರತಿಶಥ ೫.೩ ರಷ್ಟು ಮಾತ್ರ ಇದೆ. ಆರ್ಥಿಕವಾಗಿ ನಮ್ಮ ದೇಶ ಈಗ ಸದೃಢವಾಗಿದ್ದು ವಿಶ್ವದಲ್ಲಿಯೇ ಆರ್ಥಿಕ ಮೂರನೇ ಸ್ಥಾನದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ವಿಜಯಪುರ ಜಿಲ್ಲೆಗೆ ಒಟ್ಟು ೬ ರಾಷ್ಟ್ರೀಯ ಹೆದ್ದಾರಿಗಳನ್ನು ಮಂಜೂರು ಮಾಡಿಸಿ ಕೆಲಸ ಮಾಡಿದ್ದೇನೆ ಜಿಲ್ಲೆಗೆ ೧ ಲಕ್ಷ ೨೦ ಸಾವಿರ ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ, ಆದರೆ ನಾನು ಯಾವುದಕ್ಕೂ ಸಹ ಹೇಳಿಕೊಂಡಿಲ್ಲ. ಜಲಜೀವನ ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ನೀಡಿದ್ದರೂ ಸಹ ಜಿಲ್ಲೆಯ ಶಾಸಕರು ನನಗೆ ಕಾಮಗಾರಿಯ ಪೂಜೆಗೆ ಸಹ ಕರೆದಿಲ್ಲ ಆದರೂ ಸಹ ಅಭಿವೃದ್ಧಿಗೆ ನಾನು ಯಾರಿಗೂ ಪ್ರಶ್ನೆ ಮಾಡಿಲ್ಲ ನನ್ನನ್ನು ಏಕೆ ಕರೆದಿಲ್ಲ ಎಂದು ಕೇಳಿಲ್ಲ.

      ಜೆಜೆಎಂ ನಲ್ಲಿ ತಮಗೆ ಬೇಕಾದ ವ್ಯಕ್ತಿಗಳಿಗೆ ಕೆಲಸ ನೀಡಿ ಆ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ಎಂದ ಅವರು ಕಾಂಗ್ರೇಸ್ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ವಿಜಯಪೂರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಕೃಷ್ನಾ ಮೇಲ್ದಂಡೆ ಯೋಜನೆಗೆ ಪ್ರತೀ ವರ್ಷ ೨೦ ಸಾವಿರ ಕೋಟಿ ರೂಪಾಯಿ ನೀಡುತ್ತೇವೆ ಎಂದು ಹೇಳಿದ್ದರು. ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಒಂದು ರೂಪಾಯಿ ಸಹ ಹಣ ನೀಡಿಲ್ಲ ಎಂದರು.

      ಜುಲೈ ೯ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಡಿ ಪಟ್ಟಣಕ್ಕೆ ನಾಲ್ಕು ಸಾವಿರ ಕೋಟಿ ರೂಪಾಯಿಯ ಕಾಮಗಾರಿಗಳಿಗೆ ಲೋಕಾರ್ಪಣೆ ಹಾಗೂ ಭೂಮಿ ಪೂಜೆ ಆಗಮಿಸಲು ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ, ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದಿಂದ ಅನುದಾನ ನೀಡಿಲ್ಲ ನಮ್ಮ ಅನುದಾನದ ಪೂಜೆ ಮಾಡಲು ನೀವು ಬರುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.

      ಜಿಲ್ಲೆಯ ಎಂಟು ಕ್ಷೇತ್ರಗಳಿಗೆ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರತಿ ಕ್ಷೇತ್ರಕ್ಕೆ ಆರರಿಂದ ಹತ್ತು ಕೋಟಿ ರೂಪಾಯಿ ಅನುದಾನ ನೀಡಿದೆ. ಆ ಅನುದಾನ ಸಹ ತಮ್ಮದೇ ಎಂದು ಶಾಸಕರು ಪೂಜೆ ಮಾಡಿಕೊಳ್ಳುತ್ತಿದ್ದಾರೆ ಅವರ ಪಾಡಿಗೆ ಅವರು ಪೂಜೆ ಮಾಡಿಕೊಳ್ಳಲಿ ಅಭಿವೃದ್ಧಿ ನಿರಂತರವಾಗಿ ಸಾಗಲಿ ಬಿಜೆಪಿ ಮಾಡಿದ್ದ ಕಾರ್ಯಗಳಿಗೆ ಪೂಜೆ ಮಾಡಲು ಮುಖ್ಯಮಂತ್ರಿ ಬರುತ್ತಿದ್ದಾರೆ. ರೇವಣಸಿದ್ದೇಶ್ವರ ಏತ ನೀರಾವರಿಯ ಹಂತ ಒಂದು ಹಂತ ೨ ಎಂದು ಕಾಮಗಾರಿಗಳನ್ನು ಮಾಡಿ ಪೂಜೆ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಮುಖ್ಯಮಂತ್ರಿಗಳಿಗಿಲ್ಲ ಪ್ರಧಾನಿ ಮೋದಿ ಮಾಡುವಂತೆ ಕೆಲಸ ಮಾಡಿದ್ದರೆ ಈಗ ನಮ್ಮ ದೇಶ ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ಇರುತ್ತಿತ್ತು ಎಂದರು.
      ಭಾಜಪ ಮುಖಂಡರಾದ ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ,ಕಾಸು ಗೌಡ ಬಿರಾದಾರ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೇ, ಶೀಲವಂತ ಉಮರಾಣ , ಮಳುಗೌಡ ಪಾಟೀಲ,ಭಾರತ ಕುಲಕರಣ , ದೇವೇಂದ್ರ ಕುಂಬಾರ ಮಾತನಾಡಿದರು.

      ವೇದಿಕೆಯಲ್ಲಿ ಹಣಮಂತರಾಯಗೌಡ ಪಾಟೀಲ ಅನಿಲ ಗೌಡ ಬಿರಾದಾರ ವಿಜಯಲಕ್ಷ್ಮಿ ರೋಗಿಮಠ ರವಿ ಬಗ್ಗೆ ಹೊನ್ನಪ್ಪ ಪಾಟೀಲ, ಇದ್ದರು.

      ಕಾರ್ಯಕ್ರಮದಲ್ಲಿ ಬಾಳು ಮುಳಜಿ, ಶಾಂತು ಕಂಬಾರ, ಸಂಜೀವ ದಶವಂತ, ಮಂಜುನಾಥ ದೇವರ, ಮಹೇಶ್ ಹೂಗಾರ, ಮಲ್ಲು ಗುಡ್ಡ, ರಾಜಪ್ಪ ಬಡಿಗೇರ, ಶಾಮಲಾ ಬಗಲಿ, ನಾಗೇಶ ಹೆಗಡೆಯಾಳ, ರಾಮಸಿಂಗ ಕನ್ನೊಳ್ಳಿ, ಶರಣಗೌಡ ಬಂಡಿ, ರವಿಕಾಂತ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.

      ಇಂಡಿ: ಮಂಗಳವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರಕಾರ ೧೧ ವರ್ಷ ಪೂರೈಸಿದ ಪ್ರಯುಕ್ತ ಇಂಡಿ ಮಂಡಲದಿAದ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.

      Tags: #Corruption is the biggest achievement of Congress: Ramesh of MP#indi / vijayapur#Public News#Today News#Voice Of Janata#Voice Of Janata Desk News#ಭ್ರಷ್ಟಾಚಾರ ಮಾಡುವುದೇ ಕಾಂಗ್ರೆಸಿನ ದೊಡ್ಡ ಸಾಧನೆ‌: ಸಂಸದ ರಮೇಶ್
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ಕೂಡಲೇ ಬೆಳೆ ಪರಿಹಾರ ವಿತರಿಸಿ: ಸರ್ಕಾರಕ್ಕೆ ರೈತ ಮುಖಂಡ ಶಿವರಾಜ್ ಕೆಂಗನಾಳ್ ಆಗ್ರಹ”

      ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ಕೂಡಲೇ ಬೆಳೆ ಪರಿಹಾರ ವಿತರಿಸಿ: ಸರ್ಕಾರಕ್ಕೆ ರೈತ ಮುಖಂಡ ಶಿವರಾಜ್ ಕೆಂಗನಾಳ್ ಆಗ್ರಹ”

      July 14, 2026
      ಇಂದು ಬರ ಅಧ್ಯಯನಕ್ಕಾಗಿ ನಿಖಿಲ್ ಕುಮಾರಸ್ವಾಮಿ  ಇಂಡಿಗೆ ಎಂಟ್ರಿ 

      ಇಂದು ಬರ ಅಧ್ಯಯನಕ್ಕಾಗಿ ನಿಖಿಲ್ ಕುಮಾರಸ್ವಾಮಿ  ಇಂಡಿಗೆ ಎಂಟ್ರಿ 

      July 14, 2026
      ಖ್ಯಾತ ಗಾಯಕಿ ಎಸ್.ಜಾನಕಿ ವಿಧಿವಶ

      ಖ್ಯಾತ ಗಾಯಕಿ ಎಸ್.ಜಾನಕಿ ವಿಧಿವಶ

      July 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.