ಕವಡಿಮಟ್ಟಿ ಗ್ರಾಮದಲ್ಲಿ ಅಮೃತ ಸರೋವರ ದಡದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಣೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಭಾರತೀಯ ಸಾಂಸ್ಕೃತಿಕ ಪ್ರತೀಕವಾದ ಯೋಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ. ಜೂನ್-21 ರಂದು ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜಾಗತಿಕಮಟ್ಟದಲ್ಲಿ ಘೋಷಿಸಲಾಗಿದೆ ಎಂದು ಪಂಚಾಯತ ಸಹಾಯಕ ನಿರ್ದೇಶಕ (ಗ್ರಾ.ಉ.) ಪಿ.ಎಸ್.ಕಸನಕ್ಕಿ ಹೇಳಿದರು.
ತಾಲ್ಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಅಮೃತ ಸರೋವರ ದಡದಲ್ಲಿ ಶನಿವಾರ 11 ನೇ ವರ್ಷದ ವಿಶ್ವಯೋಗ ಅವರು ಚಾಲನೆ ನೀಡಿ ಮಾತನಾಡಿ, ಈ ದಿನವನ್ನು ನಾವೆಲ್ಲರು ಯೋಗ ಮಾಡುವುದರ ಮೂಲಕ ಆಚರಿಸಬೇಕು.ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಯೋಗ ಅಗತ್ಯವಿದ್ದು, ಇದನ್ನು ಪ್ರತಿ ನಿತ್ಯ ಅಭ್ಯಾಸ ಮಾಡಬಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಟಿ.ಜೀರಗಿಹಾಳ ಅವರು ಯೋಗಾಸನ ಮಾಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ನರೇಗಾ ಐಇಸಿ ಸಂಯೋಜಕ ಪರಮೇಶ ಹೊಸಮನಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಕುಂತಲಾ ಹಂಡರಗಲ್ಲ, ಸದಸ್ಯ ಹನುಮಂತ ಹಂಡರಗಲ್ಲ, ಕಾರ್ಯದರ್ಶಿ ಅಶೋಕ ಕೊರವರ,ದಂಡಪ್ಪ ವಾಲಿಕಾರ,ಆರೋಗ್ಯ ನಿರೀಕ್ಷಣಾಧಿಕಾರಿ ಕಲ್ಮೇಶಕುಮಾರ, ಆರೋಗ್ಯ ಇಲಾಖೆ ಸಿಬ್ಬಂದಿ, ಸ್ವ-ಸಹಾಯ ಸಂಘಗಳ ಸದಸ್ಯರು, ಯವ ಸಂಘಟನೆ ಸದಸ್ಯರು ಹಾಗೂ ಗ್ರಾಮಸ್ಥರು, ಗ್ರಾ.ಪಂ. ಸಿಬ್ಬಂದಿಗಳು ಸೇರಿದಂತೆ ಭಾಗವಹಿಸಿದ್ದರು.