Voiceofjanata. In DesK News ಬೆಂಗಳೂರು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್ ಟಿಸಿ) ಶಾಲಾ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿ ಗಳಿಗೆ 2025-20ನೇ ಸಾಲಿನ ರಿಯಾಯಿತಿ ದರದ ಬಸ್ ಪಾಸ್‌ಗಳನ್ನು ಜೂನ್ 2ರಿಂದ ವಿತರಿಸಲಿದೆ.
ವಿಧ್ಯಾರ್ಥಿಗಳು ಬಸ್ ಪಾಸ ಗೆ ಅರ್ಜಿ ಸಲ್ಲಿಸುವುದು ಎಲ್ಲಿ ಮತ್ತು ಹೇಗೆ..?
ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ಮೇ 31ರಿಂದ ಅರ್ಜಿ ಸಲ್ಲಿಸಬೇಕಿದ್ದು, ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬೆಂಗಳೂರು ಕೇಂದ್ರಗಳ ಮೂಲಕವು ಅರ್ಜಿ ಸಲ್ಲಿಸಬಹುದು. ಆದರೆ, ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು 30 ರೂ. ಸೇವಾ ಶುಲ್ಕ ಪಾವತಿಸಬೇಕಿದೆ. ಸಬೇಕಿದೆ.
ವಿದ್ಯಾರ್ಥಿಗಳು ಪಾಸ್‌ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಘೋಷಣಾಪತ್ರ ವನ್ನು ಸೇವಾಸಿಂಧು ತಂತ್ರಾಂಶ ಅಥವಾ ನಿಗಮದ ವೆಬ್‌ಸೈಟ್‌ನಲ್ಲಿ ಮಾಡಿಕೊಳ್ಳಬೇಕು. ಇದನ್ನು ಅರ್ಜಿ ಸಲ್ಲಿಸುವಾಗ ಅನುಕೂಲಕರವಾದ ಪಾಸ್ ಕೌಂಟರ್ ಆಯ್ಕೆ ಮಾಡಿ ಸಲ್ಲಿಸಬೇಕೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಅನುಮೋದನೆ ಬಳಿಕ ಪಾಸ್ ಪಡೆಯಲು ಭೇಟಿ ನೀಡಬೇಕಿರುವ ಕೌಂಟರ್‌ನ ವಿಳಾಸದ ಮಾಹಿತಿಯುಳ್ಳ ಎಸ್ ಎಂಎಸ್ ಅನ್ನು ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ನಿಗದಿತ ಪಾಸ್‌ನ ಶುಲ್ಕವನ್ನು ನಗದು, ಕ್ರೆಡಿಟ್, ಡೆಬಿಟ್ ಕಾರ್ಡ್, ಯುಪಿಐ ಮುಖಾಂತರ ಪಾವತಿಸಲು ಅನುವು ಮಾಡಿಕೊಡಲಾಗಿದೆ.
ರಾಜ್ಯ ಸರಕಾರವು ಮಹಿಳೆಯರಿಗೆ ಶಕ್ತಿ ಯೋಜನೆಯಡಿ ರಾಜ್ಯದೊಳಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಈ ಯೋಜನೆ ವಿದ್ಯಾರ್ಥಿನಿಯರಿಗೂ ಅನ್ವಯ ವಾಗಲಿದೆ. ಆದರೆ, ನೆರೆ ರಾಜ್ಯದಲ್ಲಿ ವಾಸವಿದ್ದು, ರಾಜ್ಯದಲ್ಲಿ ಓದುತ್ತಿರುವವರು ಹಾಗೂ ರಾಜ್ಯದಲ್ಲಿ ನೆಲೆಸಿದ್ದು, ಹೊರ ರಾಜ್ಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗಡಿ ಭಾಗದ ಮಾರ್ಗಗಳ ವಿದ್ಯಾರ್ಥಿನಿಯರು ರಿಯಾಯಿತಿ ಬಸ್ ಪಾಸ್ ಪಡೆಯಬೇಕಿದೆ.


















