ಆಲಮಟ್ಟಿ| ಮಹಾರಾಷ್ಟ್ರ ಸರ್ಕಾರದ ಹೋರಾಟಕ್ಕೆ ಸೊಪ್ಪು ಹಾಕದೆ ನ್ಯಾಯಾಲಯದ ತೀರ್ಪಿನಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ
ವಿಜಯಪುರ : ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತಿ ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ಕ್ಕೆ ನೀರು ನಿಲ್ಲಿಸಲುಗೇಟ್ ಅಳುವಡಿಸುವುದು ಹಾಗೂ ಮಹಾರಾಷ್ಟç ಸರ್ಕಾರದ ಹೋರಾಟಕ್ಕೆ ಸೊಪ್ಪು ಹಾಕದೆ ನ್ಯಾಯಾಲಯದ ತೀರ್ಪಿನಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಮೂಲಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ ಅವರಿಗೆ ಬರೆದ ಪ್ರತ್ಯೇಕ ಮನವಿಯನ್ನು ಅಖಂಡ ಕರ್ನಾಟಕ ರೈತ ಸಂಘ(ರಿ), ಕರ್ನಾಟಕ ರಾಜ್ಯ ರೈತ ಸಂಘ(ರಿ) ಜಂಟಿಯಾಗಿ ಸಲ್ಲಿಸಿದರು.
ಇದಕ್ಕೂ ಮುಂಚೆ ನೂರಾರು ರೈತರು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಅಲ್ಲಿಂದ ಬೃಹತ್ ಮೆರವಣಿಗೆ ಹೊರಟು ಮಹಾರಾಷ್ಟç ಸರ್ಕಾರದ ವಿರುದ್ಧ ದಾರಿಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ಮೆರವಣಿಯು ಡಿಸಿ ಕಚೇರಿಗೆ ತಲುಪಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವಿಜಯ ಪೂಜಾರಿ ಜಂಟಿಯಾಗಿ ಮಾತನಾಡಿ, ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತಿçà ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ಕ್ಕೆ ನೀರು ನಿಲ್ಲಿಸದಂತೆ ಮಹಾರಾಷ್ಟç ಸರ್ಕಾರ ಅಲ್ಲಿಯ ರೈತರನ್ನು ಎತ್ತಿಕಟ್ಟಿ, ಅಲ್ಲಿಯ ಶಾಸಕರು, ಸಚಿವರು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದ್ದು ಇದನ್ನು ವಿಜಯಪುರ – ಬಾಗಲಕೋಟ ಅವಳಿ ಜಿಲ್ಲೆಯ ರೈತರು ಬಲವಾಗಿ ಖಂಡಿಸುತ್ತೇವೆ.
ಮಹಾರಾಷ್ಟç ಸರ್ಕಾರ ದುರುದ್ದೇಶದಿಂದ ಉತ್ತರ ಕರ್ನಾಟಕ ರೈತರನ್ನು ಬಲಿ ತೆಗೆದುಕೊಳ್ಳಲು ಹೊರಟಿದೆ. ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತಿçà ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ಕ್ಕೆ ನಿಲ್ಲಿಸಿದರೆ ಮಹಾರಾಷ್ಟç ವ್ಯಾಪ್ತಿಯ ಸಾಂಗ್ಲಿ, ಸಾತಾರ, ಮಿರಜ ಕೊಲ್ಹಾಪೂರ ಸೇರಿದಂತೆ ಕೆಲವು ಜಿಲ್ಲೆಗಳು ಆಲಮಟ್ಟಿಯ ಹಿನ್ನೀರಿನಿಂದ ಪ್ರವಾಹಕ್ಕೆ ತುತ್ತಾಗುತ್ತವೆ ಎಂದುತಪ್ಪು ತಿಳುವಳಿಕೆ ಇಂದಲೋ ಅಥವಾ ಉದ್ದೇಶ ಪೂರ್ವಕವಾಗಿಯೋ ಹೋರಾಟಕ್ಕಿಳಿದು ಉತ್ತರ ಕರ್ನಾಟಕದ ರೈತರ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಈ ಹಿಂದೆ ಅಂದರೆ ೨೦೧೯ನೇ ಸಾಲಿನಲ್ಲಿ ಮಹಾರಾಷ್ಟç ವ್ಯಾಪ್ತಿಯಲ್ಲಿ ಪ್ರವಾಹ ಬಂದಾಗ ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತಿçà ಜಲಾಶಯದ ನೀರನ್ನು ೫೧೯.೬೦ಕ್ಕೆ ನೀರು ನಿಲ್ಲಿಸಿದಾಗ ಆಲಮಟ್ಟಿ ಹಿನ್ನೀರಿನಿಂದಲೇ ಪ್ರವಾಹ ಉಂಟಾಗಿದೆ ಎಂದು ಬೊಬ್ಬೆಹೊಡೆದಿದ್ದರು. ಅದೇ ಸಂದರ್ಭದಲ್ಲಿ ಮಹಾರಾಷ್ಟç ಸರ್ಕಾರವೇ ತಮ್ಮ ಸರ್ಕಾರದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದ ವಡ್ನರೆ ಎಂಬುವರನ್ನು ನೇಮಿಸಿ ಅದಕ್ಕೆ ಒಂದು ತಂಡ ರಚನೆ ಮಾಡಿ ಆಲಮಟ್ಟಿಗೆ ಕಳುಹಿಸಿ ಅಧ್ಯಯನ ಮಾಡಿ ವರದಿ ಸಲ್ಲಿಸಲುತಮ್ಮವರನ್ನೆ ಕಳುಹಿಸಿತ್ತು. ಮಹಾರಾಷ್ಟçದ ಅಧ್ಯಯನತಂಡ ಆಲಮಟ್ಟಿಗೆ ಆಗಮಿಸಿ ಅಲ್ಲಿಯ ಪರಿಸ್ಥಿತಿಯನ್ನು ಸಂಪೂರ್ಣ ಅಧ್ಯಯನ ಮಾಡಿದ ನಂತರ ಮಹಾರಾಷ್ಟçದಲ್ಲಿ ಪ್ರವಾಹ ಬಂದಿರುವುದು ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಅಲ್ಲ ಎಂಬುದನ್ನು ಅಧ್ಯಯನದಿಂದ ತಿಳಿದು ಬಂದಿದೆ ಎಂದು ಮಹಾರಾಷ್ಟç ಸರ್ಕಾರಕ್ಕೆ ಸ್ಪಷ್ಟ ವರದಿಯನ್ನು ಕಳುಹಿಸಿದ್ದರು. ಆದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಉದ್ದೇಶ ಪೂರ್ವಕವಾಗಿ ಅಲ್ಲಿಯ ರೈತರನ್ನು ಎತ್ತಿಕಟ್ಟಿ ಬೀದಿಗಿಳಿದು ಹೋರಾಟ ಮಾಡಿ ತಮ್ಮ ಬಂಡತನವನ್ನು ಪ್ರದರ್ಶಿಸುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರ ಮಹಾರಾಷ್ಟç ಸರ್ಕಾರದ ಒತ್ತಡಕ್ಕೆ ಮಣೆಯದೆ ಉತ್ತರ ಕರ್ನಾಟಕದ ರೈತರ ಹಿತ ಕಾಪಾಡಲು ನ್ಯಾಯಾಧೀಕರಣದ ತೀರ್ಪಿನಂತೆ ಕ್ರಮ ಕೈಗೊಳ್ಳಬೇಕು. ೨೦೧೦ನೇ ಸಾಲಿನಲ್ಲಿಯೇ ನ್ಯಾ|| ಬ್ರೀಜೇಶಕುಮಾರ ನೇತೃತ್ವದ ೨ನೇ ನ್ಯಾಯಾಧೀಕರಣವು ತೀರ್ಪು ನೀಡಿತು. ಮತ್ತೇ ೨೦೧೩ರಲ್ಲಿ ಅಂತಿಮ ತೀರ್ಪು ನೀಡಿ ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತಿçà ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ಕ್ಕೆ ನಿಲ್ಲಿಸಲು ಗೇಟ್ ಅಳವಡಿಸಲು ಸ್ಪಷ್ಟವಾದ ತೀರ್ಪು ನೀಡಿದೆ. ಆ ತೀರ್ಪಿನನ್ವಯ ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಮಹಾರಾಷ್ಟç ಸರ್ಕಾರ ತೆಗೆದಿರುವ ಕ್ಯಾತೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಮಹಾರಾಷ್ಟç ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಮತ್ತು ಕೇಂದ್ರ ಸರ್ಕಾರವು ಕೂಡಾ ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತಿçà ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ಕ್ಕೆ ನಿಲ್ಲಿಸಲು ಕೂಡಲೇ ಅಧಿಸೂಚನೆ ಹೊರಡಿಸಬೇಕು. ಈ ನಿಟ್ಟಿನಲ್ಲಿಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಮಹಿಳಾ ರೈತ ಮುಖಂಡರಾದ ಸುಜಾತಾ ಬಂಡಿವಡ್ಡರ ಮಾತನಾಡಿ, ಮಹಾರಾಷ್ಟç ಸರ್ಕಾರ ಇಷ್ಟಕ್ಕೆ ಸುಮ್ಮನಿದ್ದರೆ ಸರಿ ಅಲ್ಲಿಯ ರೈತರನ್ನು ಎತ್ತಿಕಟ್ಟಿ, ಅಲ್ಲಿಯ ಸಚಿವರು, ಶಾಸಕರು ಹೋರಾಟಕ್ಕೆ ಮುಂದುವರೆಸಿದರೆ ಉಗ್ರವಾದ ಹೋರಾಟಕ್ಕೆ ರೈತ ಮಹಿಳೆಯರು ಕೂಡಾ ಸನ್ನದ್ಧರಾಗಬೇಕಾಗುತ್ತದೆ ಎಂದು ಮಹಾರಾಷ್ಟç ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಮಹಾರಾಷ್ಟç ಸರ್ಕಾರದ ಹೋರಾಟಕ್ಕೆ ಮಣಿಯದೆ ಕರ್ನಾಟಕ ಸರ್ಕಾರ ಸಮಗ್ರ ನೀರಾವರಿ ಕಲ್ಪಿಸಲು ಜಲಾಶಯ ನೀರಿನ ಮಟ್ಟ ಎತ್ತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಬೆಂಬಲ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಘಟಕ ವಿಜಯಪುರ ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವಿಜಯ ಪೂಜಾರ, ರೈತ ಸಂಘದ ಮುಖಂಡರಾದ ವಿಠ್ಠಲ ಬಿರಾದಾರ, ಚಂದ್ರಾಮ ಹಿಪ್ಪಲಿ, ರಾಜೇಂದ್ರ ದೇಸಾಯಿ, ಹೊನಕೇರೆಪ್ಪ ತೆಲಗಿ, ಲಾಲಸಾಬ ಹಳ್ಳೂರ, ಶೆಟ್ಟೆಪ್ಪ ಲಮಾಣಿ, ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ನಾಗೇಶ ಪೂಜಾರಿ, ಅನೀತಾ ರಾಠೋಡ, ಸವಿತಾ ರಾಠೋಡ, ಸಾವಿತ್ರಿ ವಾಲಿಕಾರ, ಸಾಹಿನಾ ಇಂಡಿ, ಸುಜಾತಾ ಬಂಡಿವಡ್ಡರ, ಸುಶೀಲಾ ರಾಠೋಡ, ಬಸವರಾಜ ಜಂಗಮಶೆಟ್ಟಿ, ಗುರು ಕೋಟ್ಯಾಳ, ರಮೇಶ ಮುಂಡೆವಾಡಿ, ಮಲಿಗೆಪ್ಪಾ ಸಾಸನೂರ, ಗುರಲಿಂಗಪ್ಪ ಪಡಸಲಗಿ, ದಾವಲಸಾ ನಧಾಪ, ಶಶಿಕಲಾ ಬಡಿಗೇರ, ಸುಶೀಲಾ ಮಿಣಜಗಿ, ನೀಲಾಂಬಿಕಾ ಬಿರಾದಾರ, ಭಾಗಿರಥಿ ಗುಡದಿನ್ನಿ, ಜ್ಯೋತಿ ಕುಮಠಗಿ, ಬಸವರಾಜ ಬಾಗೇವಾಡಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


















