ಇಂಡಿಯಲ್ಲಿ ಲೆಮನ್ ಟಿ ಪಾಯಿಂಟ್ ಉದ್ಘಾಟನೆ : ಶಾಸಕ ಪಾಟೀಲ
ಮಧ್ಯವರ್ತಿಗಳ ಹಾವಳಿ ತಡೆಗೆ ನಿಂಬೆ ಬೆಳೆ ಮೌಲ್ಯವರ್ಧನ ಮಾಡಿ- ಯಶವಂತರಾಯಗೌಡ
ಇಂಡಿ : ರೈತರು ತಾವು ಬೆಳೆದ ನಿಂಬೆ ಬೆಳೆಗೆ ಮೌಲ್ಯವರ್ಧನ ಮಾಡಿ ನಿಂಬೆ ಉಪ್ಪಿನಕಾಯಿ, ನಿಂಬೆ ಜ್ಯೂಸ, ನಿಂಬೆ ಪೌಡರ, ಲೇಮನ್ ಟೀ ಪೌಡರ ಮಾಡಿ ಅಧಿಕ ಲಾಭ ಪಡೆಯಬಹುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಆಡಳಿತ ಸೌಧ ಆವರಣದಲ್ಲಿ ತೋಟಗಾರಿಗೆ ಇಲಾಖೆ ಮತ್ತು ರಾಜ್ಯ ನಿಂಬೆ ಅಭಿವೃದ್ದಿಯಿಂದ ನಿರ್ಮಿಸಿದ ಲೆಮನ್ ಟಿ ಪಾಯಿಂಟ್ ಉದ್ಘಾಟಿಸಿ ಮಾತನಾಡಿದರು.
ಅತಿ ಹೆಚ್ಚು ನಿಂಬೆ ಬೆಳೆ ಬೆಳೆಯುವ ಇಂಡಿ ಪಟ್ಟಣದಲ್ಲಿ ರಾಜ್ಯ ಮಟ್ಟದ ನಿಂಬೆ ಅಭಿವೃದ್ದಿ ಮಂಡಳಿ ಕಚೇರಿ ಆರಂಭಿಸಲಾಗಿದ್ದು ಈ ಭಾಗದ ನಿಂಬೆಗೆ ರಾಜ್ಯ ಮಟ್ಟದ ಸ್ಥಾನ ಮಾನ ದೊರೆಯುವಂತೆ ಮಾಡಲಾಗಿದೆ. ನಿಂಬೆ ಆನ್ ಲೈನ್ ಖರಿದಿಗೆ ಪ್ರಯತ್ನಿಸಲಾಗುತ್ತಿದೆ ಎಂದರು.
ನಿಂಬೆ ಅಭಿವೃದ್ದಿ ಮಂಡಳಿ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಪಾಟೀಲ ಮಾತನಾಡಿ ಸಧ್ಯ ಇಂಡಿಯಲ್ಲಿ ಲೇಮನ್ ಟೀ ಪಾಯಿಂಟ್ ಪ್ರಾರಂಭ ಮಾಡಿದ್ದು ಬರುವ ದಿನಗಳಲ್ಲಿ ಬೆಂಗಳೂರಿನ ಯಶವಂತಪೂರ ಮತ್ತು ಪ್ರತಿ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ನಿಂಬೆ ಅಭಿವೃದ್ದಿ ಮಂಡಳಿಯಿಂದ ಮಳಿಗೆಗಳನ್ನು ಪ್ರಾರಂಭಿಸಲಾಗುವದು.
ರೈತರ ಸಂಘಗಳನ್ನು ಮಾಡಿ ಆ ಸಂಘದಿಂದ ನಿಂಬೆ ಉಪ್ಪಿನಕಾಯಿ, ನಿಂಬೆ ಜ್ಯೂಸ ಪೌಡರ, ಲೇಮನ ಟೀ ಪೌಡರ ಸೇರಿದಂತೆ ಇನ್ನಿತರ ಉತ್ಪಾದಕ ಘಟಕಗಳನ್ನು ಪ್ರಾರಂಭಿಸಲಾಗುವದು. ರೈತರಿಗೆ ಹೆಚ್ಚು ಆದಾಯ ಬರಲು ಅನುಕೂಲ ವಾಗುತ್ತದೆ ಎಂದರು. ಸಧ್ಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಉತ್ಪಾದನೆ ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ರೈತ ಸಂಘಗಳಿಗೆ ನೀಡಲಾಗುವದು ಎಂದರು.
ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಅರಣ್ಯ ಅಧಿಕಾರಿ ಎಸ್.ಜಿ.ಸಂಗಾಲಕ, ಮಂಜುನಾಥ ಧುಳೆ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಇಲಿಯಾಸ ಬೋರಾಮಣ , ಪ್ರಶಾಂತ ಕಾಳೆ, ಪಶು ಸಂಗೋಪನಾ ಹಿರಿಯ ವೈದ್ಯ ಡಾ. ರಾಜಕುಮಾರ ಅಡಕಿ, ನಿಂಬೆ ಅಭಿವೃದ್ದಿ ಮಂಡಳಿ ಮತ್ತು ತೋಟಗಾರಿಕೆ ಸಿಬ್ಬಂದಿ ಮತ್ತಿತರಿದ್ದರು.
ಇಂಡಿಯ ಆಡಳಿತ ಸೌಧದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಲೇಮನ್ ಟೀ ಪಾಯಿಂಟ ಉದ್ಘಾಟಿಸಿ ಮಾತನಾಡಿದರು. ಎಸಿ ಅನುರಾಧಾ ವಸ್ತçದ ಚಿತ್ರದಲ್ಲಿದ್ದಾರೆ.



















