ಮೇ-29 ರಂದು ಇಂಡಿಯಲ್ಲಿ ಬೃಹತ್ ತಿರಂಗಾ ಯಾತ್ರೆ
ಇಂಡಿ : ಪಟ್ಟಣದಲ್ಲಿ ಮೇ ೨೯ ರಂದು ಗುರುವಾರ ಬೆಳಗ್ಗೆ ೧೦.೩೦ ಗಂಟೆಗೆ ತಿರಂಗಾ ಯಾತ್ರೆ ಜರುಗಲಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮಾಜಿ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಸಮಸ್ತ ಪೂಜ್ಯರು, ಹಾಗೂ ಮಾಜಿ ಸೈನಿಕರ ಅಧ್ಯಕ್ಷತೆಯಲ್ಲಿ ಪಕ್ಷಾತೀತ ಮತ್ತು ಜಾತ್ಯಾತೀತ ಜರುಗಲಿದೆ.
ತಿರಂಗ ಯಾತ್ರೆಯಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ವಕೀಲರು, ಅಭಿಯಂತರರು, ವೈದ್ಯರು, ವ್ಯಾಪಾರಸ್ಥರು ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಲು ತಿಳಿಸಿದರು.
ತಿರಂಗಾ ಯಾತ್ರೆ ಶ್ರೀ ಶಿವಾಜಿ ವೃತ್ತದಿಂದ ಶ್ರೀ ಬಸವೇಶ್ವರ ವೃತ್ತದ ವರೆಗೆ ನಡೆಯಲಿದೆ ಎಂದು ಕಾಸುಗೌಡ ಬಿರಾದಾರ ತಿಳಿಸಿದರು.
ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣ , ಶ್ರೀಕಾಂತ ದೇವರ, ಹಣಮಂತಗೌಡ ಪಾಟೀಲ, ಅನೀಲ ಜಮಾದಾರ ಮತ್ತಿತರಿದ್ದರು.
೨೫ ಇಂಡಿ ೦೩ ಕಾಸುಗೌಡ ಬಿರಾದಾರ



















