ಕೇಂದ್ರದ ಮಹತ್ವಕಾಂಕ್ಷಿ ಯೋಜನೆ ಆಸ್ಪತ್ರೆ ಆವರಣದಿಂದ ಹೊರಗೆ, ಆಕ್ರೋಶ: ವಿಜಯಕುಮಾರ್
ವಿಜಯಪುರ : ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರ ನಿರ್ಣಯವಾದ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರವನ್ನು ಎಲ್ಲಾ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿ. ಈ ಆದೇಶಕ್ಕೆ ಸಮಜಾಯಿಸಿ ಸರಕಾರಿ ಆಸ್ಪತ್ರೆಯಲ್ಲಿ ಔಷಧಿಗಳನ್ನ ಮಾರಾಟ ಮಾಡುವಂತಿಲ್ಲ ಎನ್ನುವ ನಿಯಮದಡಿ ಕಾರಣ ಹೇಳಿ ಸಮಾಜಾಯಿಸಿ ಭಾರತ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರ ಹೊರಹಾಕಿದ್ದಾರೆ.
ನಾನು ಇವರಿಗೆ ಕೇಳ್ತೇನೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕೊಡುವ ಔಷಧಿಗಳು ಲಭ್ಯ ಇಲ್ಲಾ ಅಂದ್ರೇ ರೋಗಿಗಳು ಹೊರಗಡೆ ಹೋಗಿ ಜನ ಔಷಧಿ ಕೇಂದ್ರವನ್ನು ಹುಡುಕಾಡಬೇಕಾ? ಔಷಧಿ ಕೇಂದ್ರ ಸಿಗದೇ ಇದ್ದ ಪಕ್ಷದಲ್ಲಿ ರೋಗಿಗಳು ಅನಾವಶ್ಯಕವಾಗಿ ಹೆಚ್ಚಿನ ದರದ ಔಷಧಿಯನ್ನು ಖರೀದಿ ಮಾಡುವ ಅನಿವಾರ್ಯತೆ ಹುಟ್ಟಿ ಹಾಕಿದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರ ಈ ನಿರ್ಣಯವನ್ನು ನಾನು ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕನಾಗಿ ಖಂಡಿಸುತ್ತೇನೆ. ಯಾಕೆ ಈ ಕಾಂಗ್ರೆಸ್ ಸರ್ಕಾರಕ್ಕ ತಲೆನೂ ಇಲ್ಲಾ ಬುದ್ದಿನೂ ಇಲ್ಲಾ..
ಏನೋ ಹೇಳ್ತಾರಲ್ಲ some thing is better than nothing ಅಂತಾ.
ಸರಕಾರಿ ಆಸ್ಪತ್ರೆಯಲ್ಲಿ ಔಷಧ ಸಿಗುತ್ತಿಲ್ಲ ಅಥವಾ ಲಭ್ಯವಿಲ್ಲ ಎಂದಾಗ ಕನಿಷ್ಠ ಪಕ್ಷ ರೋಗಿಗಳು ಕಡಿಮೆಯ ಖರ್ಚಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರದಲ್ಲಾದರೂ ಖರೀದಿಸುವ ಅನುಕೂಲವಿತ್ತು, ತಮ್ಮ ವೈಯಕ್ತಿಕ ರಾಜಕಾರಣದಿಂದ ಈ ನಿರ್ಣಯ ಅದೆಷ್ಟೋ ರೋಗಿಗಳಿಗೆ ತೊಂದರೆ ಕೊಡುತ್ತಿದೆ ಎಂದು ಬಿಜೆಪಿ ರಾಜ್ಯ ಸಂಚಾಲಕರು ವಿಜಯಕುಮಾರ್ ಕುಡಿಗನೂರ ಪತ್ರಿಕಾ ಹೇಳಿಕೆ ನೀಡಿದ್ದಾರೆ.


















